ನಾಟಾ ಪರೀಕ್ಷೆ: ಆಳ್ವಾಸ್ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗಡೆ

Update: 2019-05-06 16:31 GMT

ಮಂಗಳೂರು, ಮೇ 6: ನ್ಯಾಷನಲ್ ಆಪ್ಟಿಟ್ಯುಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ನಾಟಾ-2019) ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪಿ.ಯು ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದಾರೆ.

ಎಪ್ರಿಲ್ 14ರಂದು ನಡೆದ ನಾಟಾ ಪರೀಕ್ಷೆಯಲ್ಲಿ ಆಕಾಂಕ್ಷಾ ವಿ.ಎ. (160), ರೋಹಿತ್ ಆರ್. (154), ರಕ್ಷಿತ್ ಆರ್. (150), ಕೇಶವಮೂರ್ತಿ (142), ಲಿಖಿತ್ ಕೆ. (142), ಶ್ರೀನಿಧಿ (142), ಚಂದನ ಎ.ಎಂ. (141), ಮೆಲ್ಬಿನ್ ಅಲೆಕ್ಸ್ (140), ಮೈತ್ರಿ (139), ಪ್ರಿಯಾಂಕ (139), ಪ್ರದ್ಯುಮ್ನ (139), ಆಶಿಶ್ ಎಸ್. (138), ಕವನಾಜೆ (138), ಸಮೀಕ್ಷ (136), ಕಾರ್ತಿಕ್ ಡಿ. (136), ವಿಕಾಸ್ ವಿ. ಕಷ್ಯಪ್ (134), ವರ್ಷಿಣಿ ಅಗಸಗಿ (132), ರಕ್ಷಿತಾ ಎಂ.ಡಿ. (132), ಪ್ರಜ್ವಲ್ ನಾಯಕ್ (132), ಪ್ರಜ್ವಲ್ ಎಸ್. (132), ಅನ್ವಿತಿ ಎನ್.ಎಚ್. (132), ಪ್ರತೀಕಾ ವಿ. (131), ನವ್ಯ ಎಸ್.ಎನ್. (131), ಪುನೀತ್‌ಕುಮಾರ್ ವಿ.(130), ಮನೋಜ್ ಎಂ.ಆರ್. (130), ಮನೋಜ್ ಎನ್. (130) ಸೇರಿದಂತೆ ಒಟ್ಟು 26 ವಿದ್ಯಾರ್ಥಿಗಳು 130ಕ್ಕಿಂತ ಅಧಿಕ ಅಂಕ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಜೊತೆಗೆ 125ಕ್ಕಿಂತ ಅಧಿಕ 52 ವಿದ್ಯಾರ್ಥಿಗಳು, 120ಕ್ಕಿಂತ ಅಧಿಕ 87 ವಿದ್ಯಾರ್ಥಿಗಳು, 110ಕ್ಕಿಂತ ಅಧಿಕ 166 ವಿದ್ಯಾರ್ಥಿಗಳು, 100 ಕ್ಕಿಂತ ಅಧಿಕ 265 ವಿದ್ಯಾರ್ಥಿಗಳು, 90ಕ್ಕಿಂತ ಅಧಿಕ 353 ವಿದ್ಯಾರ್ಥಿಗಳು, 80ಕ್ಕಿಂತ ಅಧಿಕ 428 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಪರೀಕ್ಷೆಗೆ ಕುಳಿತ 523 ವಿದ್ಯಾರ್ಥಿಗಳಲ್ಲಿ 480 ವಿದ್ಯಾರ್ಥಿಗಳು ಅತಿಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಆಯ್ಕೆಯಾಗಿರುವ ಆರ್ಕಿಟೆಕ್ಚರ್ ಕೋರ್ಸ್ ಸೇರಲು ಅತ್ಯಂತ ಸಹಕಾರಿಯಾಗಿದೆ.

ಪ್ರತಿ ವರ್ಷ ನಾಟಾ ವಿಭಾಗದಲ್ಲಿ ಸಂಸ್ಥೆಯ ಸಾಧನೆ ಮಹತ್ವದಾಗಿದ್ದು, ಹಲವಾರು ವಿದ್ಯಾರ್ಥಿಗಳ ಆರ್ಕಿಟೆಕ್ಟ್ ಆಗುವ ಕನಸು ಯಶಸ್ವಿಯಾಗಿ ಸಾಕಾರಗೊಳ್ಳುತಿದೆ ಎಂದು ಸಂಸ್ಥೆಯ ಮುಖ್ಯಸ್ಥ ಡಾ. ಎಂ.ಮೋಹನ್ ಆಳ್ವ ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.

ಕಳೆದ ಬಾರಿ ಆಳ್ವಾಸ್‌ನ 326 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ರಾಜ್ಯ ಮಟ್ಟದಲ್ಲಿ ವೈಷ್ಣವಿ ನಾಯಕ್ 2ನೇ ಹಾಗೂ ಶಶಾಂಕ್ ಡಿ. 5ನೇ ರ್ಯಾಂಕ್ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News