ಮಕ್ಕಳಲ್ಲಿ ತಾರತಮ್ಯ ಸಲ್ಲದು: ಬೌಧ್ಯನ್ ಬಿಸ್ವಾಸ್

Update: 2019-05-06 16:39 GMT

ಮಂಗಳೂರು, ಮೇ 6: ‘ಕೃತಿ ಗೆದ್ದಾಗ ಖುಷಿ ಹೆಚ್ಚುತ್ತದೆ. ಆ ಖುಷಿ ಮತ್ತಷ್ಟು ಸಾಧನೆಯನ್ನು ಮಾಡುವುದಕ್ಕೆ ಪ್ರೇರಣೆಯಾಗುತ್ತದೆ. ಮಕ್ಕಳನ್ನು ಪ್ರೋತ್ಸಾಹಿಸಬೇಕು. ಆದರೆ ತಾರತಮ್ಯ ಮಾಡಬಾರದು ಎಂದು ಸ್ಟಾರ್ ಹೈಪರ್ ಮಾರ್ಕೆಟ್‌ನ ರೆನಲ್ ಬಿಸಿನೆಸ್ ಹೆಡ್ ಬೌಧ್ಯನ್ ಬಿಸ್ವಾಸ್ ಅಭಿಪ್ರಾಯಪಟ್ಟರು.

ನಗರದ ಸಿಟಿ ಸೆಂಟರ್‌ನಲ್ಲಿ ಕಾರ್ಯಾಚರಿಸುತ್ತಿರುವ ಸ್ಪಾರ್ ಹೈಪರ್ ಮಾರ್ಕೆಟ್‌ನಲ್ಲಿ ಸನ್‌ಪ್ರೀಮಿಯಂ ಸೂರ್ಯಕಾಂತಿ ಎಣ್ಣೆ ಸಂಸ್ಥೆಯ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಪಾರ್ ಸಂಸ್ಥೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಎಲ್‌ಕೆಜಿ-ಯುಕೆಜಿ ವಿಭಾಗದಲ್ಲಿ ವಂಶಿಕ ಎಸ್. ಪ್ರಥಮ, ನಿನಿಷ ಪೃಶ ದ್ವಿತೀಯ, ಅನುಪ್ರಿಯ ತೃತೀಯ ಸ್ಥಾನ ಪಡೆದರು. 1ರಿಂದ 3ನೇ ತರಗತಿ ವಿಭಾಗದಲ್ಲಿ ಪವನ್ ಕೃಷ್ಣ ಪ್ರಥಮ, ಮುಹಮ್ಮದ್ ಆನಸ್ ಖಾನ್ ದ್ವಿತೀಯ, ರಿಷಾ ಕೆ. ಶೆಟ್ಟಿ ತೃತೀಯ ಬಹುಮಾನ ಪಡೆದರು.

4ರಿಂದ 6ನೇ ತರಗತಿ ವಿಭಾಗದಲ್ಲಿ ಅಕ್ಷಜ್ ಪ್ರಥಮ, ಓಜಸ್ವಿ ದ್ವಿತೀಯ, ಕಿಶನ್ ತೃತೀಯ ಬಹುಮಾನ ಪಡೆದರು. 7ನೇ ತರಗತಿಯಿಂದ 10ನೇ ತರಗತಿ ವಿಭಾಗದಲ್ಲಿ ಅನನ್ಯ ಎಚ್. ಪ್ರಥಮ, ದಿಯಾ ರಾವ್ ದ್ವಿತೀಯ ಮತ್ತು ಗಂಧಾಕ್ಷ ತೃತೀಯ ಬಹುಮಾನ ಪಡೆದರು. ತೀರ್ಪುಗಾರರಾಗಿ ಚಿತ್ರಕಲಾ ಗುರುಗಳಾದ ಚಂದ್ರಯ್ಯ, ಚಿತ್ರ ಕಲಾವಿದ ಲಕ್ಷ್ಮೀನಾರಾಯಣ ಭಾಗವಹಿಸಿದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಸ್ಪಾರ್ ಸಿಟಿಸೆಂಟರ್‌ನ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಕಡಂಬಾರ್, ಸಹ ವ್ಯವಸ್ಥಾಪಕ ನವೀನ್ ಅಮೀನ್, ಸನ್‌ಪ್ರೀಮಿಯಂ ಸೂರ್ಯಕಾಂತಿ ಎಣ್ಣೆ ಇದರ ಮಾರುಕಟ್ಟೆ ಅಧಿಕಾರಿ ದೀಪಕ್, ಸ್ಪಾರ್ ಮಂಗಳೂರು ಆಡಳಿತ ವ್ಯವಸ್ಥಾಪಕ ಬಳಗದ ಕಾ.ವೀ.ಕೃಷ್ಣದಾಸ್, ಸುಕೇಶ್ ಶೆಟ್ಟಿ, ವಿಶ್ವನಾಥ್, ಲಕ್ಷ್ಮೀಶ್, ಮಹೇಶ್ ಮೆಂಡನ್, ಪ್ರದೀಪ್ ಸುವರ್ಣ, ಜನಾರ್ದನ್ ನಾಯ್ಕಿ, ಸತೀಶ್ ಮಾರ್ಟಿನ್ ಡಿಸೋಜ, ಅವಿನಾಶ್, ವಿಲ್ಫ್ರೆಡ್ ಲೋಬೊ, ಪಾಂಡುರಂಗ, ಸುನಿಲ್‌ಕುಮಾರ್, ಸೌಮ್ಯ ಆಚಾರ್ಯ, ಸ್ನಿಗ್ಧ ರಾಜ್, ಭರತ್, ಸುಬ್ರಹ್ಮಣ್ಯ, ಮಹೇಶ್, ಈಸಿಬೈ ಬಳಗದ ಸತೀಶ್ ಮತ್ತು ಲತೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News