ಎನ್‌ಎಂಪಿಟಿ: ಪೊಲೀಸ್ ಕಾನ್‌ಸ್ಟೇಬಲ್ ನಾಪತ್ತೆ
Update: 2019-05-06 17:17 GMT
ಮಂಗಳೂರು, ಮೇ 6: ನಗರದ ಎನ್‌ಎಂಪಿಟಿಯ ಸಿಐಎಸ್‌ಎನ್ ಯುನಿಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಂದ್ರಪ್ರದೇಶ ಮೂಲದ ವಿ. ಪ್ರತಾಪ್ (28) ಅವರು ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತಾಪ್ ಅವರನ್ನು ‘ಸಿ’ ಪಾಳಿಯ ಕರ್ತವ್ಯಕ್ಕೆ ನೇಮಿಸಿದ್ದು ಮೇ 1ರಂದು ಸಂಜೆ ವೇಳೆ ಕರ್ತವ್ಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಯುನಿಟ್ ಹೆಡ್ ಕ್ವಾಟ್ರಸ್ ಹಾಗೂ ಎಲ್ಲ ಕಡೆ ಹುಡುಕಿದರೂ ಎಲ್ಲಿಯೂ ಕಾಣೆಯಾಗದೆ ನಾಪತ್ತೆಯಾಗಿದ್ದು, ಮನೆಯವರಿಗೆ ಫೋನ್ ಮಾಡಿ ವಿಚಾರಿಸಿದರೂ ಅಲ್ಲಿಯೂ ತೆರಳಿಲ್ಲ ಎಂದು ತಿಳಿದುಬಂದಿದೆ.
ಚಹರೆ: ನೀಲಿ ಬಣ್ಣದ ಉದ್ದ ತೋಳಿನ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್, 176ಸೆಂ.ಮೀ., ತೆಲುಗು, ಹಿಂದಿ, ಇಂಗ್ಲೀಷ್ ಮಾತನಾ ಡುತ್ತಾರೆ. ಗೋಧಿ ಮೈಬಣ್ಣ, ದುಂಡುಮುಖ ಹೊಂದಿದ್ದು, ಇವರ ಬಗ್ಗೆ ಮಾಹಿತಿ ಸಿಕ್ಕವರು ಮಂಗಳೂರು ನಗರ ಕಂಟ್ರೋಲ್ ರೂಮ್ ಅಥವಾ ಪಣಂಬೂರು ಠಾಣೆಗೆ ಮಾಹಿತಿ ನೀಡಬಹುದು.