ಎರಡೂ ಕಿಡ್ನಿ ವೈಫಲ್ಯ: ಸಹಾಯಕ್ಕೆ ಮನವಿ
ಪುತ್ತೂರು: ತನ್ನ ಎರಡೂ ಕಿಡ್ನಿ ವೈಫಲ್ಯಗೊಂಡಿರುವ ಬಡ ಮುಸ್ಲಿಯಾರ್ ಒಬ್ಬರು ದಾನಿಗಳ ಸಹಾಯ ಯಾಚಿಸುತ್ತಿದ್ದಾರೆ.
ಮೂಲತ: ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪದ ರೆಂಜಲಾಡಿ ನಿವಾಸಿಯಾಗಿದ್ದು, ಪ್ರಸ್ತುತ ಸುಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಹಮೀದ್ ಜಮಾಲ್ ಅರ್ಷದಿ ಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿ.
ಕಳೆದ ಹಲವಾರು ವರ್ಷಗಳಿಂದ ಮಕ್ಕಳಿಗೆ ಧಾರ್ಮಿಕ ಭೋಧನಾ ಕೆಲಸ ನಡೆಸುತ್ತಿರುವ ಹಮೀದ್ ಜಮಾಲ್ ಅರ್ಷದಿ ಅವರು ಬಿಳಿಯೂರು, ಅರಂಬೂರು, ಆತೂರು ಮುಕ್ಕ ಮತ್ತಿತರ ಕಡೆಗಳಲ್ಲಿ ಸದರ್ ಮುಅಲ್ಲಿಂ ಆಗಿ ಸೇವೆ ಸಲ್ಲಿಸಿದ್ದರು.
ಇದೀಗ ಅನಾರೋಗ್ಯದ ಕಾರಣದಿಂದಾಗಿ ಕೆಲಸ ಮಾಡಲೂ ಸಾದ್ಯವಾಗದೆ ನಿರುದ್ಯೋಗಿಯಾಗಿದ್ದಾರೆ. ಅಲ್ಲದೆ ಪತ್ನಿ, ಮೂವರು ಪುಟ್ಟ ಮಕ್ಕಳಿರುವ ತನ್ನ ಕುಟುಂಬವನ್ನು ಸಾಕಿ ಸಲಹುವ ಜವಾಬ್ದಾರಿಯೂ ಇವರ ಮೇಲಿದೆ.
ಅವರ ಕಿಡ್ನಿಗಳು ಶೇ. 92ರಷ್ಟು ವೈಫಲ್ಯಗೊಂಡಿದ್ದು, ಕೇವಲ ಶೇ.6 ಮಾತ್ರ ಕ್ರಿಯಾಶೀಲವಿದೆ. ಕಿಡ್ನಿ ಕಸಿ ಮಾಡುವಂತೆ ಸೂಚನೆ ನೀಡಿದ್ದಾರೆ. ಆದರೆ ಕಡು ಬಡತನದಿಂದ ಬದುಕುತ್ತಿರುವ ಅವರಿಗೆ ಹಣ ಭರಿಸುವ ಶಕ್ತಿಯಿಲ್ಲ. ಇದಕ್ಕಾಗಿ ಸಹೃದಯಿ ದಾನಿಗಳಿಂದ ಸಹಾಯಧನ ಯಾಚಿಸುತ್ತಿದ್ದಾರೆ.
ಆಸಕ್ತ ದಾನಿಗಳು ಹಮೀದ್ ಅರ್ಷದಿ ಅವರ ದೂರವಾಣಿ ಸಂಖ್ಯೆ: 9632446375 ಸಂಪರ್ಕಿಸಬಹುದು ಅಥವಾ ಬ್ಯಾಂಕ್ ಖಾತೆ: ಕೆನರಾ ಬ್ಯಾಂಕ್, ತಿಂಗಳಾಡಿ, ಪುತ್ತೂರು ತಾಲೂಕು. ಖಾತೆ ನಂಬ್ರ: 6252101002013, ಐಎಫ್‍ಎಸ್‍ಸಿ ಕೋಡ್-ಸಿಎನ್‍ಆರ್‍ಬಿ0006252 ಇಲ್ಲಿಗೆ ನೀಡಬಹುದು.