ರೈಲು ಢಿಕ್ಕಿ ಹೊಡೆದು ಮೃತ್ಯು
Update: 2019-05-07 16:42 GMT
ಬ್ರಹ್ಮಾವರ, ಮೇ 7: ಚಲಿಸುತ್ತಿದ್ದ ರೈಲು ಢಿಕ್ಕಿ ಹೊಡೆದ ಪರಿಣಾಮ ರೈಲು ಹಳಿ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೇ 7ರಂದು ಮಧ್ಯಾಹ್ನ ವೇಳೆ ಉಪ್ಪೂರು ಗ್ರಾಮದ ಕೊಳಲಗಿರಿ ಎಂಬಲ್ಲಿ ನಡೆದಿದೆ.
ಮೃತರನ್ನು ಕೊಳಲಗಿರಿ ನಿವಾಸಿ ಸುಂದರ ಶೆಟ್ಟಿ(75) ಎಂದು ಗುರುತಿಸ ಲಾಗಿದೆ. ಇವರು ಮೂತ್ರಪಿಂಡ ಕಾಯಿಲೆ ಬಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೇ6ರಂದು ಬಿಡುಗಡೆ ಹೊಂದಿ ಮನೆಯಲ್ಲಿ ವಿಶ್ರಾಂತಿ ಪಡೆ ಯುತ್ತಿದ್ದರು. ಮರುದಿನ ಮಧ್ಯಾಹ್ನ ವೇಳೆ ಮನೆ ಸಮೀಪದ ಕೊಂಕಣ್ ರೈಲ್ವೆ ಹಳಿ ದಾಟಲು ಹೋದಾಗ ಚಲಿಸುತ್ತಿದ್ದ ರೈಲಿನ ಇಂಜಿನ್ ಇವರ ತಲೆಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಪರಿಣಾಮವಾಗಿ ಗಂಭೀರವಾಗಿ ಗಾಯ ಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.