ಅಕ್ರಮ ಮರಳು ಸಾಗಾಟ: ಇಬ್ಬರ ಬಂಧನ
Update: 2019-05-07 16:43 GMT
ಕುಂದಾಪುರ, ಮೇ 7: ಬಸ್ರೂರು ಗ್ರಾಮದ ಹಟ್ಟಿಕುದ್ರು ಎಂಬಲ್ಲಿ ಮೇ 6ರಂದು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಹಟ್ಟಿಯಂಗಡಿ ಗ್ರಾಮದ ಗುಡ್ಡೆಯಂಗಡಿಯ ಪ್ರವೀಣ್(38) ಹಾಗೂ ಹೆಮ್ಮಾಡಿಯ ಬಸವರಾಜ(49) ಬಂಧಿತ ಆರೋಪಿಗಳು. ಇವರು ಅಕ್ರಮ ವಾಗಿ ಮರಳನ್ನು ಕಳವು ಮಾಡಿ ಸಾಗಾಟ ಮಾಡಲು ಪಿಕಪ್ ವಾಹನಕ್ಕೆ ತುಂಬಿ ಸುತ್ತಿದ್ದರೆನ್ನಲಾಗಿದೆ. ಈ ವೇಳೆ ದಾಳಿ ನಡೆಸಿದ ಪೊಲೀಸರು 3,00,000 ರೂ. ಮೌಲ್ಯದ ವಾಹನ, ಅದರಲ್ಲಿದ್ದ 3ಸಾವಿರ ರೂ. ಮೌಲ್ಯದ 1 ಯುನಿಟ್ ಮರಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.