ಮೆಹಂದಿ ಕಾರ್ಯಕ್ರಮದಲ್ಲಿ ಚೂರಿ ಇರಿತ; ಇಬ್ಬರಿಗೆ ಗಾಯ
Update: 2019-05-07 17:00 GMT
ಮಂಗಳೂರು, ಮೇ 7: ನಗರದ ಹೊಯ್ಗೆಬಜಾರ್‌ದಲ್ಲಿ ಸೋಮವಾರ ರಾತ್ರಿ ಹಾಲ್‌ವೊಂದರಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆದಿದ್ದು, ಚೂರಿ ಇರಿತ ಮತ್ತು ಬಾಟಲಿಯ ಹೊಡೆತದಿಂದ ಇಬ್ಬರು ಗಾಯಗೊಂಡಿದ್ದಾರೆ.
ಬೋಳಾರದ ಮಹೀಂದ್ರ ಶೆಟ್ಟಿ ಮತ್ತು ಸುರಾಗ್ ಶೆಟ್ಟಿ ಗಾಯಗೊಂಡವರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಜ್ಞಾನೇಶ್, ರಾಹುಲ್ ಯಾನೆ ಕಕ್ಕೆ ಮತ್ತು ಇತರರು ಈ ಹಲ್ಲೆ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಎಲ್ಲ ಆರೋಪಿಗಳು ತಪ್ಪಿಸಿ ಕೊಂಡಿದ್ದಾರೆ. ಹಳೆ ದ್ವೇಷ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.