ರಮಝಾನ್ ಮೇಗಾ ಆಫರ್: ಇಟಾಲಿಯನ್ ಮಾಡೆಲ್ ಫರ್ನಿಚರ್ ಮಾರಾಟ-ಪ್ರದರ್ಶನ

Update: 2019-05-07 17:09 GMT

ಮಂಗಳೂರು, ಮೇ 7: ಹ್ಯಾಂಡಿಕ್ರಾಫ್ಟ್ ಫರ್ನಿಚರ್‌ಗಳ ಬೃಹತ್ ಮಾರಾಟ ಮೇಳವನ್ನು ನಗರದ ಎಂ.ಜಿ.ರೋಡ್ ಪಿವಿಎಸ್ ಸರ್ಕಲ್‌ನ ಮಾನಸ ಟವರ್‌ನ ಎದುರಿನ ದಿ.ವೈಷ್ಯ ಎಜುಕೇಷನ್ ಸೊಸೈಟಿಯಲ್ಲಿ ಆಯೋಜಿಸಲಾಗಿದ್ದು, ರಮಝಾನ್‌ನ ವಿಶೇಷ ಕೊಡುಗೆಯಾಗಿಶೇ.50ರ ರಿಯಾಯಿತಿ ಕಲ್ಪಿಸಲಾಗಿದೆ.

ಒಂದು ಮಹಾರಾಜ ಸೋಫಾ ಸೆಟ್ ಖರೀದಿಸಿದರೆ ಒಂದು ಟೀಪಾಯಿ ಉಚಿತವಾಗಿ ಪಡೆಯುವ ಅವಕಾಶವಿದೆ. ಮನೆಯನ್ನು ಅಲಂಕರಿಸಲು ಇಲ್ಲಿ ನೂರಾರು ವಿವಿಧ್ಯಮಯ ಫರ್ನಿಚರ್‌ಗಳು ಲಭ್ಯಯಿವೆ. ಪ್ರದರ್ಶನಕ್ಕಾಗಿ ಮಹಾರಾಜ ಸೋಫಾಸೆಟ್, ರೊಯೆಲ್ ಮಾಡೆಲ್ ದಿವಾನ್, ಇಟಾಲಿಯನ್ ಮಾಡೆಲ್ ಡೈನಿಂಗ್ ಸೆಟ್, ಮೊಘಲ್ ಡಿಸೈನ್ ಡಬಲ್ ಕಾಟ್, ಟಿವಿ ಸ್ಟ್ಯಾಂಡ್ (ಎಲ್ಲ ಸೈಜ್‌ನಲ್ಲಿ), ಡೈನಿಂಗ್ ಸೆಟ್, ಡ್ರೆಸ್ಸಿಂಗ್ ಟೇಬಲ್, ರೊಕಿಂಗ್ ಚೇರ್, ಕಾರ್ನರ್ ಸ್ಟ್ಯಾಂಡ್, ರೂಂ ಡಿವೈಡರ್ ಇನ್ನೂ ಅನೇಕ ನಮೂನೆಯ ಹಾಗೂ ಸೈಜ್‌ನ ಟೀಪಾಯಿ ಅಲ್ಮಾರ, 50ಕ್ಕಿಂದ ಮಿಕ್ಕಿದ ಟೀಪಾಯಿ ಗಿಫ್ಟ್ ಐಟಮ್ಸ್ ನ್ಯಾಯವಾದ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೋಫಾ ಸೆಟ್‌ಗಳು ಲಭ್ಯ ಇವೆ.

ಅಲ್ಲದೆ, ಮನೆಯನ್ನು ಅಲಂಕರಿಸಲು ಅನೇಕ ವಿಧದ ಹ್ಯಾಂಡಿಕ್ರಾಫ್ಟ್ ಐಟಮ್ಸ್, 100ಕ್ಕಿಂತ ಹೆಚ್ಚಿನ ಮಾದರಿಯ ಪೀಠೋಪಕರಣಗಳು ಒಂದೇ ಸೂರಿನಡಿ ಲಭ್ಯ. ಎಲ್ಲ ಫರ್ನಿಚರ್‌ಗಳು ಶೀಶಮ್ ಮತ್ತು ಟೀಕ್‌ವುಡ್‌ನಿಂದ ತಯಾರಿಸಲಾಗಿದೆ.

ಮಾರಾಟ ಮತ್ತು ಪ್ರದರ್ಶನವು ಗ್ರಾಹಕರ ಅನುಕೂಲಕ್ಕಾಗಿ ರವಿವಾರವು ಸೇರಿದಂತೆ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ. ಇಲ್ಲಿ ಖರೀದಿಸಲಾದ ದೊಡ್ಡ ಪೀಠೋಪಕರಣಗಳನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಿಕೊಡಲಾಗುವುದು. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಗಳನ್ನು ಸ್ವೀಕರಿಸಲಾಗುವುದು. ಈ ಕೊಡುಗೆ ಕೇವಲ 5 ದಿನಗಳು ಮಾತ್ರ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News