ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ ಐಎನ್‌ಎಸ್ ಶಿವಾಜಿ ತಂಡ ಭೇಟಿ
Update: 2019-05-07 17:13 GMT
ಮಂಗಳೂರು, ಮೇ 7: ಭಾರತೀಯ ನೌಕಾ ಹಡಗು ಐಎನ್‌ಎಸ್ ಶಿವಾಜಿ ತಂಡದ ಅಧಿಕಾರಿಗಳ ತಂಡವು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿತು.
ಐಎನ್‌ಎಸ್ ಶಿವಾಜಿಯ ಸ್ಥಾಪನೆಯ 75ನೇ ವರ್ಷಾಚರಣೆಯ ಸಲುವಾಗಿ ಮೋಟಾರ್ ಕಾರ್ ದಂಡಯಾತ್ರೆಯು ಚಾಲನೆಯಲ್ಲಿದ್ದು, ಇದರ ಪರವಾಗಿ ಐಎನ್‌ಎಸ್ ತಂಡವು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿತು.
ಐಎನ್‌ಎಸ್ ತಂಡದ ನಾಲ್ವರು ಹಿರಿಯ ಅಧಿಕಾರಿಗಳು, ಓರ್ವ ನಾವಿಕ ಮತ್ತು ಇಬ್ಬರು ನಾಗರಿಕ ರಕ್ಷಣಾ ನೌಕರರಿದ್ದರು. ಭಾರತೀಯ ನೌಕಾಪಡೆಯು ನಿಯಮಿತವಾಗಿ ಕಾಲೇಜಿನ ವಿದ್ಯಾರ್ಥಿಗಳ ನೇಮಕಾತಿಯನ್ನು ನಡೆಸುತ್ತಿದ್ದು, ಇದೊಂದು ಸೌಹಾರ್ದ ಭೇಟಿಯಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯು ಪ್ರಕಟನೆಯಲ್ಲಿ ತಿಳಿಸಿದೆ.