ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ: ದೃಢಪಡಿಸಿದ ಕಾರವಾರ ನೌಕಸೇನೆ

Update: 2019-05-08 08:41 GMT

ಉಡುಪಿ, ಮೇ 8: ನಾಲ್ಕೂವರೆ ತಿಂಗಳುಗಳಿಂದ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಮಾಲ್ವಾನ್ ಪ್ರದೇಶದ ಸಮುದ್ರ ತೀರದಿಂದ 30 ಕಿ.ಮೀ. ದೂರದಲ್ಲಿ 60 ಮೀಟರ್ ಆಳದಲ್ಲಿ ಪತ್ತೆಯಾಗಿರುವುದನ್ನು ನೌಕಸೇನೆಯ ಕಾರವಾರ ನೇವಲ್ ಬೇಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.

ಬೋಟು ಅವಶೇಷ ಪತ್ತೆಯಾಗಿರುವ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ನೌಕಸೇನೆಯ ಕಾರವಾರ ನೇವಲ್ ಬೇಸ್ ಅಧಿಕಾರಿಗಳಿಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಮೇ 3ರಂದು ಪತ್ರ ಬರೆದಿದ್ದರು. ಇದಕ್ಕೆ ನೇವಲ್ ಬೇಸ್ ಅಧಿಕಾರಿಗಳು ಬೋಟು ಹಾಗೂ ಮೀನುಗಾರರ ಪತ್ತೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯ ಕುರಿತ ವಿವರವನ್ನು ಎಸ್ಪಿಯವರಿಗೆ ನೀಡಿದ್ದಾರೆ.

ಎ.30ರಿಂದ ಮೇ 2ರವರೆಗೆ ಈ ಕಾರ್ಯಾಚರಣೆ ನಡೆಸಿದ್ದು, ಕೊನೆ ದಿನ ಸಮುದ್ರದ ಸುಮಾರು 60 ಮೀಟರ್ ಆಳದಲ್ಲಿ ಬೋಟಿನ ಅವಶೇಷ ಪತ್ತೆ ಯಾಗಿದ್ದು, ಈ ಕಾರ್ಯಾಚರಣೆಗೆ ಐಎನ್‌ಎಸ್ ನಿರೀಕ್ಷಕ್, ಮುಳುಗು ತಜ್ಞರು ಹಾಗೂ ಸೈಡ್‌ಸ್ಕಾನ್ ಸೋನಾರ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರಾಗಿ ಶಾಸಕ ರಘುಪತಿ ಭಟ್ ಹಾಗೂ ಇತರ ಒಂಭತ್ತು ಮಂದಿ ಭಾಗವಹಿಸಿರುವುದಾಗಿ ನೌಕಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಎಸ್ಪಿ ನಿಶಾ ಜೇಮ್ಸ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News