ಮದೀನಾದಲ್ಲಿ ಉಪವಾಸ ತೊರೆದ ಸಚಿವ ಖಾದರ್
Update: 2019-05-08 17:20 GMT
ಮಂಗಳೂರು, ಮೇ 8: ರಾಜ್ಯ ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪವಿತ್ರ ರಂಝಾನ್ ತಿಂಗಳ 3ನೇ ದಿನದ ಉಪವಾಸವನ್ನು ಬುಧವಾರ ಪವಿತ್ರ ಮದೀನಾ ಮಸ್ಜಿದ್‌ನಲ್ಲಿ ತೊರೆದರು.
ರವಿವಾರ ಕೋಝಿಕೋಡ್ ವಿಮಾನ ನಿಲ್ದಾಣದಿಂದ ಕುಟುಂಬ ಸಮೇತ ಮೆಕ್ಕಾಯಾತ್ರೆ ಕೈಗೊಂಡ ಸಚಿವರು, ಪವಿತ್ರ ಹರಂನಲ್ಲಿ ಉಮ್ರಾ ನೆರವೇರಿಸಿ ಬುಧವಾರ ಮೆಕ್ಕಾದಿಂದ ಮದೀನಾಕ್ಕೆ ಬುಲೆಟ್ ರೈಲಿನಲ್ಲಿ ಸಂಚರಿಸಿದರು.
ಮದೀನಾ ಯಾತ್ರೆ ಮುಗಿಸಿ ಶುಕ್ರವಾರ ಸಚಿವರು ವಾಪಸಾಗಲಿದ್ದಾರೆ. ಮದೀನಾದಲ್ಲಿ ಇಫ್ತಾರ್ ತೊರೆಯುವ ಸಂದರ್ಭ ಮದೀನಾ ಕೆಸಿಎಫ್ ಪ್ರಮುಖರಾದ ತಾಜುದ್ದೀನ್ ಸುಳ್ಯ ಉಪಸ್ಥಿತರಿದ್ದರು.