ಕೊರಿಂಗಿಲ: ಅಶ್ಬಾಹುಲ್ ಇಸ್ಲಾಂ ವೆಲ್ಫೇರ್ ಅಸೋಸಿಯೇಶನ್ ನ ಮಹಾಸಭೆ
Update: 2019-05-09 06:31 GMT
ಪುತ್ತೂರು, ಮೇ 9: ಕೊರಿಂಗಿಲದ ಅಶ್ಬಾಹುಲ್ ಇಸ್ಲಾಂ ವೆಲ್ಫೇರ್ ಅಸೋಸಿಯೇಶನ್ ನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕೊರಿಂಗಿಲ ಮದ್ರಸ ಹಾಲ್ ನಲ್ಲಿ ನಡೆಯಿತು.
ಜಮಾಅತ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಹಾಜಿ ಕೊರಿಂಗಿಲ ಹಾಗೂ ಜಮಾಅತ್ ಕಮಿಟಿ ಉಪಾಧ್ಯಕ್ಷ ಇಸ್ಮಾಯಿಲ್ ಹಾಜಿ ಏಂಪಕಲ್ಲು ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಸೋಸಿಯೇಶನ್ ನ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ಲ ಕೀಲಂಪಾಡಿ, ಉಪಾಧ್ಯಕ್ಷರಾಗಿ ಅಶ್ರಫ್ ಕುಕ್ಕಪುಣಿ, ಪ್ರಧಾನ ಕಾರ್ಯದರ್ಶಿಯಾಗಿ ನೌಫಲ್ ಬೆಟ್ಟಂಪಾಡಿ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಸಿ.ಎಚ್. ಗುಂಡ್ಯಕ್ಕ,ಅಝೀಝ್ ತೋಟದಮೂಲೆ, ಖಜಾಂಚಿಯಾಗಿ ಅನ್ವರ್ ಕೆ.ಎಂ.ಕೆ. ಕೊರಿಂಗಿಲ, ಪತ್ರಿಕಾ ಪ್ರತಿನಿಧಿಯಾಗಿ ನೌಶಾದ್ ಬೀಂತಡ್ಕ ಹಾಗೂ ಹಲವು ಸದಸ್ಯರನ್ನೊಳಗೊಂಡ ಹೊಸ ಕಮಿಟಿ ರಚಿಸಲಾಯಿತು.
ಕಮಿಟಿಯ ಮಾಜಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕುಕ್ಕಪುಣಿ ಸಮಿತಿಯ ವಾರ್ಷಿಕ ವರದಿ ವಾಚಿಸಿದರು. ಜಮಾಅತ್ ಖತೀಬ್ ಅಯ್ಯೂಬ್ ವಹಬಿ ದುಆಗೈದರು.