ಬಜಾಲ್ ಮಸೀದಿಯ ಅಧ್ಯಕ್ಷರಾಗಿ ಅಬ್ದುರ್ರವೂಫ್ ಪುನರಾಯ್ಕೆ

Update: 2019-05-09 11:27 GMT

ಮಂಗಳೂರು, ಮೇ 9: ಬಜಾಲ್ ಬದ್ರಿಯಾ ಜುಮ್ಮಾ ಮಸೀದಿ ಹಯಾತುಲ್ ಇಸ್ಲಾಂ ಮದ್ರಸ ಮತ್ತು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಮಹಾಸಭೆಯು ಮಾಜಿ ತಾಪಂ ಸದಸ್ಯ ಬಿ.ಅಹ್ಮದ್ ಬಾವರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.

ಮಸೀದಿಯ ಖತೀಬ್ ಇಲ್ಯಾಸ್ ಅಮ್ಜದಿ ದುಆಗೈದರು. ಕಾರ್ಯದರ್ಶಿ ಶಾಫಿ ಮಿಸ್ಬಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು.

2019-20ನೇ ಸಾಲಿನ ಅಧ್ಯಕ್ಷರಾಗಿ ಮಾಜಿ ಕಾರ್ಪೊರೇಟರ್ ಅಬ್ದುಲ್ ರವೂಫ್ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಮುಹಮ್ಮದ್ ಅಶ್ರಫ್ ತೋಟ, ಹಾಜಿ ಎಸ್.ಎಚ್.ಮುಹಮ್ಮದ್ ಹನೀಫ್, ಅಶ್ರಫ್ ಕೆ.ಇ., ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ವೈ, ಕೋಶಾಧಿಕಾರಿಯಾಗಿ ಅಬ್ದುಲ್ ಸಲಾಂ, ಕಾರ್ಯದರ್ಶಿಗಳಾಗಿ ಸಂಶುದ್ಧೀನ್ ಬಿ.ಕೆ, ಶಾಫಿ ಮಿಸ್ಬಾಲ್, ಸಂಚಾಲಕರಾಗಿ ಬಿ.ಫಕ್ರುದ್ಧೀನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಜಿ ಹಮೀದ್ ಮುಸ್ಲಿಯಾರ್, ನಝೀರ್ ಬಜಾಲ್, ಮುಹಮ್ಮದ್ ಹನೀಫ್ ಬೈಕಂಪಾಡಿ, ಹಸನಬ್ಬ ಮೋನು, ಇಕ್ಬಾಲ್ ಅಹ್ಸ್‌ನಿ, ಟಿ.ಎಫ್. ಅಬ್ದುಲ್ಲಾ, ಅಬ್ದುಲ್ ಹಮೀದ್ ಹೊಟೇಲ್ ಮದೀನಾ, ಮುಹಮ್ಮದ್ ಹನೀಫ್ ಕೆಳಗಿನ ಮನೆ ಅವರನ್ನು ಆಯ್ಕೆ ಮಾಡಲಾಯಿತು.

ಮಾಜಿ ಅಧ್ಯಕ್ಷರಾದ ಹಾಜಿ ಡಾ.ಡಿ.ಕೆ ಅಬ್ದುಲ್ ಹಮೀದ್, ಹಾಜಿ ಬಿ.ಎನ್ ಅಬ್ಬಾಸ್, ಹಾಜಿ ಎಂ.ಎಚ್ ಅಬ್ದುಲ್ ರಹ್ಮಾನ್, ಹಾಜಿ ಇಬ್ರಾಹೀಂ ಗರೋಡಿ, ಅಬ್ದುಲ್ ರಝಾಕ್ ಸಾಗರ್, ಅಬ್ದುಲ್ ಅಝೀಝ್ ಬಿ.ಕೆ, ಅಬ್ಬಾಸ್ ಶಾಂತಿನಗರ, ಅಬ್ದುಲ್ ಖಾದರ್ ಕೊಡಂಗೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News