ಶ್ರೀದೇವಿ ಕಾಲೇಜಿನಲ್ಲಿ ‘ಸಂಶೋಧನ್’ ಪ್ರೊಜೆಕ್ಟ್ ಮಾದರಿ ಪ್ರದರ್ಶನ
ಮಂಗಳೂರು, ಮೇ 9: ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಂಶೋಧನ್-2019 ಅಂತಿಮ ವರ್ಷ ಬಿ.ಇ ಮತ್ತು ಎಂ.ಸಿ.ಎ. ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಮಂಗಳೂರಿನ ಉದ್ಯಮಿ ಸೌರಭ ನಹಾತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ಸಾಹ, ಏಕಾಗ್ರತೆ, ಶ್ರೇಷ್ಠತೆ ಈ ಮೂರು ಮಂತ್ರಗಳನ್ನು ಅಳವಡಿಸಿಕೊಂಡು ಜೀವನವನ್ನು ಯಶಸ್ವಿಗೊಳಿಸಬಹುದು ಎಂದು ಹೇಳಿದರು.
ಸಂಸ್ಥೆಯ ವಿವಿಧ ವಿಭಾಗಗಳಾದ ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಏರೋನಾಟಿಕಲ್ ಇಂಜಿನಿಯರಿಂಗ್, ಇನ್ಫಾರ್ಮೇಶನ್ ಸೈನ್ಸ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಎಂ.ಸಿ.ಎ. ಮತ್ತು ಎಂ.ಟೆಕ್ ವಿಭಾಗಗಳ ವಿದ್ಯಾರ್ಥಿಗಳು 186 ಮಾದರಿಗಳನ್ನು ಪ್ರದರ್ಶಿಸಲಾಯಿತು.
ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಡಾ.ಕೆ.ಇ. ಪ್ರಕಾಶ್ ಕಾರ್ಯಕ್ರಮದ ಪಕ್ಷಿನೋಟ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯ ಡಾ.ದಿಲೀಪ್‌ಕುಮಾರ್ ಕೆ., ಶ್ರೀದೇವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೈನಾ ಎಸ್. ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಸುಧೀರ್‌ಕುಮಾರ್ ಉಪಸ್ಥಿತರಿದ್ದರು.ಸಂಧ್ಯಾ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಾಹಸ್ ಶೆಟ್ಟಿ ವಂದಿಸಿದರು.