ಶೈಲೇಶ್ ಉಪಾಧ್ಯಾಯಗೆ ಆತ್ಮಶ್ರಾದ್ಧಾ, ಕೇಶಮುಂಡನ
Update: 2019-05-09 15:58 GMT
ಉಡುಪಿ, ಮೇ 9: ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ ಉತ್ತರಾಧಿಕಾರಿಯಾಗಿ ನಿಯೋಜಿಸಲ್ಪಟ್ಟ ಕಂಬ್ಲಕಟ್ಟ ಶೈಲೇಶ ಉಪಾದ್ಯಾಯ ಎಂಬ ವಟುವಿಗೆ ಸನ್ಯಾಸ ಧೀಕ್ಷೆಯ ಪೂರ್ವಭಾವಿಯಾಗಿ ಆತ್ಮಶ್ರಾದ್ಧಾ ಹಾಗೂ ಕೇಶಮುಂಡನ ವಿಧಿವಿಧಾನಗಳು ಇಂದು ನಡೆದವು. ಸನ್ಯಾಸದೀಕ್ಷೆ ಹಾಗೂ ಪಟ್ಟಾಭಿಭೇಷ ಕಾರ್ಯಕ್ರಮಗಳು ಮೇ 12ರ ರವಿವಾರ ನಡೆಯಲಿವೆ.
ಆತ್ಮಶ್ರಾದ್ಧಾದಿಗಳ ಬಳಿಕ ತುರೀಯಾಶ್ರಮವಾದ ಸನ್ಯಾಸ ಅಧಿಕಾರ ಯೋಗ್ಯತಾ ಸಿದ್ಧಿಗೋಸ್ಕರವಾಗಿ ಪ್ರಾಯಶ್ಚಿತ್ತ ಪೂರ್ವಕ ಸತ್ಪಾತ್ರರಿಗೆ ಗೋದಾನ ಹಾಗೂ ದಶದಾನಗಳನ್ನು ಮಾಡಿ ಕೇಶಮುಂಡನ ಹಾಗೂ ಮಧ್ವಸರೋವರದಲ್ಲಿ ಪವಿತ್ರಸ್ನಾನ ನಡೆಯಿತು.