ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಸೌಲಭ್ಯ ಪ್ರಾರಂಭ

Update: 2019-05-10 16:46 GMT

ಉಡುಪಿ, ಮೇ 10: ಇತ್ತೀಚೆಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯ ನಿರ್ವಹಿಸುತ್ತಿರುವ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೇ 9ರಂದು ಪ್ರಥಮ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಸಾಕಷ್ಟು ಜನೋಪಯೋಗಿಯಾಗಿ ಕಾರ್ಯ ನಿರ್ವಹಿಸುವ ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರದಲ್ಲಿ ಪ್ರಸೂತಿ ತಜ್ಞೆ ಡಾ.ದೀಕ್ಷಿತಾ ಹಾಗೂ ಅರವಳಿಕೆ ತಜ್ಞ ಡಾ. ಅಜಿತ್ ಕುಮಾರ್ ಶೆಟ್ಟಿ ಯಶಸ್ವಿಯಾಗಿ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆಸಿದರು. ಮಕ್ಕಳ ತಜ್ಞ ಡಾ.ಮಹಾಬಲ ಕೆ.ಎಸ್ ನವಜಾತ ಶಿಶುವಿನ ಯೋಗ ಕ್ಷೇಮ ನೋಡಿಕೊಂಡರು. ಶುಶ್ರೂಷಕಿಯರು ಹಾಗೂ ಇತರ ಸಿಬ್ಬಂದಿಗಳು ಸಹಕರಿಸಿದರು.

ಈ ಆಸ್ಪತ್ರೆಯಲ್ಲಿ ಈಗಾಗಲೇ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಯುತ್ತಿದ್ದು, ಈಗ ಸಿಸೇರಿಯನ್ ಶಸ್ತ್ರಚಿಕಿತ್ಸೆಯೂ ಸಾಧ್ಯವಾಗಿ ರುವುದರಿಂದ ಮುಂದೆ ಬ್ರಹ್ಮಾವರದ ಸುತ್ತಮುತ್ತಲಿನ ಜನತೆಗೆ ಇದು ಉತ್ತಮ ಹೆರಿಗೆ ಅಸ್ಪತ್ರೆಯಾಗಿ ಸೇವೆ ಸಲ್ಲಿಸುವಂತಾಗಿದೆ.

ಇದರೊಂದಿಗೆ ಆಸ್ಪತ್ರೆಯಲ್ಲಿ ದಂತ ತಜ್ಞರು, ದಂತ ವೈದ್ಯಕೀಯ ಎಕ್ಸರೇ ಸೌಲ್ಯ, ಮಕ್ಕಳತಜ್ಞರು, ಸಾಮಾನ್ಯ ಎಕ್ಸ್‌ರೇ ಸೌಲ್ಯ, ಅಸಾಂಕ್ರಾಮಿಕ ರೋಗಗಳ ವಿಭಾಗ, ಫಿಸಿಯೋಥೆರಪಿ ವಿಭಾಗ, ಸುಸಜ್ಜಿತ ಹಾಗೂ ಗುಣಮಟ್ಟದ ಸೌಲ್ಯಗಳಿರುವ, ನುರಿತ ತಂತ್ರಜ್ಞರಿರುವ ಪ್ರಯೋಗಾಲಯ ಮತ್ತಿತರ ಸೌಲ್ಯಗಳೂ ಲಭ್ಯವಿದೆ.

ಈಗಾಗಲೇ ಬ್ರಹ್ಮಾವರ ತಾಲೂಕು ಘೋಷಣೆಯಾಗಿದ್ದು, ತಾಲೂಕು ಆಸ್ಪತ್ರೆ ಯಾಗಿ ಮೇಲ್ದರ್ಜೆಗೇರುವ ಎಲ್ಲಾ ಅರ್ಹತೆಗಳನ್ನು ಈ ಆಸ್ಪತ್ರೆ ಹೊಂದಿದೆ. ಕಾಯಕಲ್ಪಕಾರ್ಯಕ್ರಮದಲ್ಲಿ 18-19ನೇ ಸಾಲಿಗೆ ಸ್ವಚ್ಚ ರತ್ನ ಪ್ರಶಸ್ತಿ ಗಳಿಸಿದ್ದು, 2019 -20 ನೇ ವರ್ಷದಲ್ಲಿ ಸರಕಾರಿ ಆಸ್ಪತ್ರೆ ಗಳಿಗೆ ನಿಗದಿಪಡಿಸಿದ ರಾಷ್ಟ್ರೀಯ ಗುಣಮಟ್ಟ ಖಾತರಿ ಕಾರ್ಯಕ್ರಮದಲ್ಲೂ ಭಾಗವಹಿಸಿ ಅರ್ಹತೆಗಳಿಸಲು ಪ್ರಯತ್ನಿಸುತ್ತಿದೆ ಎಂದು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News