ತಣ್ಣೀರುಬಾವಿಯಲ್ಲಿ ಬೋಟ್‌ನ ಇಂಜಿನ್ ಕಳವು
Update: 2019-05-10 17:12 GMT
ಮಂಗಳೂರು, ಮೇ 10: ತಣ್ಣೀರುಬಾವಿ ಬ್ರೇಕ್ ವಾಟರ್ ಬಳಿ ನಿಲ್ಲಿಸಲಾದ ಬೋಟ್‌ನ ಇಂಜಿನ್ ಕಳವು ಮಾಡಿರುವ ಘಟನೆ ನಡೆದಿದೆ.
ಬೋಟ್‌ನ ಮಾಲಕರು ತಣ್ಣೀರುಬಾವಿ ಬ್ರೇಕ್ ವಾಟರ್ ಬಳಿ ಸಮುದ್ರಕ್ಕೆ ತೆರಳಿ ಬಲೆಯನ್ನು ಹಾಕಿ ಸಮುದ್ರದ ದಡಕ್ಕೆ ಬಂದು ಟೀ ಕುಡಿಯುವ ಹೋಗಿದ್ದರು. ದೋಣಿ ಮತ್ತು ಅದರಲ್ಲಿದ್ದ ಇಂಜಿನ್‌ನ್ನು ಸಮುದ್ರದ ದಡದ ಮರಳು ಜಾಗದಲ್ಲಿ ಇಟ್ಟು ಚಹಾ ಕುಡಿಯಲು ಬಂದಿದ್ದರು. ಆದರೆ ಮಧ್ಯಾಹ್ನ ಮರಳಿ ಬರುವಾಗ ದೋಣಿ ಬಳಿಯಿದ್ದ ಯಮಹ ಇಂಜಿನ್‌ನ್ನು ಯಾರೋಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.