ಗ್ರಾಮಚಾವಡಿಯಲ್ಲಿ ಅನಧಿಕೃತ ಮದ್ಯದಂಗಡಿಗೆ ಡಿವೈಎಫ್‌ಐ ವಿರೋಧ

Update: 2019-06-22 12:21 GMT

ತೊಕ್ಕೊಟ್ಟು, ಜೂ.22: ಹರೇಕಳ ಗ್ರಾಮದ ಗ್ರಾಮಚಾವಡಿ ಜಂಕ್ಷನ್ ಬಳಿ ಅನಧಿಕೃತವಾಗಿ ತೆರೆದಿರುವ ಮದ್ಯದ ಅಂಗಡಿಯನ್ನು ಬಂದ್ ಮಾಡುವಂತೆ ಡಿವೈಎಫ್‌ಐ ಹರೇಕಳ ಗ್ರಾಮ ಸಮಿತಿ ಒತ್ತಾಯಿಸಿದೆ.

ಸ್ಥಳೀಯ ಗ್ರಾಪಂ ಪರವಾನಿಗೆಯನ್ನು ಪಡೆಯದೆ ಗ್ರಾಮದಲ್ಲಿ ಅಕ್ರಮ ಮದ್ಯದಂಗಡಿ ತೆರೆಯಲಾಗಿದೆ. ಪಕ್ಕದಲ್ಲೇ ಶಾಲೆ, ಮಹಿಳಾ ಹೊಲಿಗೆ ತರಬೇತಿ ಕೇಂದ್ರ, ಧಾರ್ಮಿಕ ಕೇಂದ್ರಗಳು ಹಾಗೂ ಜನವಸತಿ ಪ್ರದೇಶ ಇರುವುದರಿಂದ ಮುಂದೆ ಬಹಳಷ್ಟು ಸಮಸ್ಯೆಗಳು ಉದ್ಭವಿಸಲಿವೆ. ಹೆಚ್ಚಾಗಿ ಕೂಲಿ ಕೆಲಸ ಮಾಡಿ ಬದುಕುವವವರೇ ಅಧಿಕ ಸಂಖ್ಯೆಯಲ್ಲಿದ್ದು, ಭವಿಷ್ಯದಲ್ಲಿ ಅವರು ಮದ್ಯದ ದಾಸ್ಯಕ್ಕೆ ತುತ್ತಾಗಿ ಕುಟುಂಬ ಸಹಿತ ಬೀದಿಪಾಲಾಗುವ ಭಯವು ಮಹಿಳೆಯರನ್ನು ಕಾಡತೊಡಗಿದೆ. ಶಿಕ್ಷಣ ಕೇಂದ್ರಗಳ ಬಳಿ ಮದ್ಯದಂಗಡಿ ತೆರೆಯಬಾರದೆಂಬ ಕಾನೂನಿದ್ದರೂ ಗಾಳಿಗೆ ತೂರಿ ಅನಧಿಕೃತವಾಗಿ ಮದ್ಯದಂಗಡಿ ಪ್ರಾರಂಭಗೊಂಡಿದೆ. ಈಗಾಗಲೇ ಮದ್ಯದಂಗಡಿಯನ್ನು ಮುಚ್ಚಲು ಒತ್ತಾಯಿಸಿ ನಾಗರಿಕರು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಮದ್ಯದಂಗಡಿ ಮುಚ್ಚಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿವೈಎಫ್‌ಐ ಮುಖಂಡ ರಫೀಕ್ ಹರೇಕಳ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News