ಸಾರ್ವಜನಿಕರ ಕಾನೂನು ಅರಿವು, ದೂರು ದಾಖಲಿಸಲು ಬೆಂಗಳೂರು ನಗರ ಪೊಲೀಸ್ ಘಟಕದಿಂದ sharechat ಖಾತೆ ಆರಂಭ

Update: 2019-07-25 18:49 GMT

ಬೆಂಗಳೂರು, ಜು.25: ಬೆಂಗಳೂರು ನಗರ ಪೊಲೀಸ್ ಘಟಕವು ಕನ್ನಡದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ, ಸಂದೇಶ, ವೀಡಿಯೋ, ಆಡಿಯೋದಲ್ಲಿ ರೂಪದಲ್ಲಿ ಮಾಹಿತಿ ನೀಡಲು ಹಾಗೂ ತಮ್ಮ ದೂರುಗಳನ್ನು ದಾಖಲಿಸಲು sharechat  ಖಾತೆಯನ್ನು (@blrcitypolice#ಬೆಂಗಳೂರು ನಗರ ಪೊಲೀಸ್) ಬೆಂಗಳೂರು ನಗರ ಪೊಲೀಸ್ ಘಟಕವು ಪ್ರಾರಂಭಿಸಿದೆ.

ನಗರ ಪೊಲೀಸ್ ಘಟಕವು ಈಗಾಗಲೆ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಟ್ವೀಟರ್, ಫೇಸ್‌ಬುಕ್, ಯೂಟ್ಯುಬ್, ವಾಟ್ಸ್ ಆ್ಯಪ್ ಮೂಲಕ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿಯನ್ನು ನೀಡಲಾಗುತ್ತಿದೆ. ಹಾಗೂ ಈ ಜಾಲತಾಣಗಳ ಮೂಲಕವೆ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಹಾಗೂ ದೂರುಗಳನ್ನು ಪಡೆದು ಇತ್ಯರ್ಥಗೊಳಿಸಲಾಗುತ್ತಿದೆ.

ಈಗ ಬೆಂಗಳೂರು ಪೊಲೀಸ್ ಘಟಕವನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ sharechat ಖಾತೆಯನ್ನು ನಗರ ಪೊಲೀಸ್ ಆಯುಕ್ತ ಆಲೋಕ್‌ಕುಮಾರ್ ಉದ್ಘಾಟಿಸಿದ್ದಾರೆ. ಬಳಿಕ ಮಾತನಾಡಿದ ಅವರು, sharechat  ಖಾತೆ ಮೂಲಕ ಸಾರ್ವಜನಿಕರ ದೂರುಗಳನ್ನು ಮತ್ತಷ್ಟು ಪರಿಣಾಮಕಾರಿ ಹಾಗೂ ಶೀಘ್ರವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News