ಚಂದ್ರಯಾನ 2ನ್ನು ಎರಡನೇ ಕಕ್ಷೆಗೇರಿಸುವ ಕಾರ್ಯ ಪೂರ್ಣ: ಇಸ್ರೋ

Update: 2019-07-26 16:02 GMT

ಬೆಂಗಳೂರು, ಜು.26: ಚಂದ್ರಯಾನ 2 ಬಾಹ್ಯಾಕಾಶ ನೌಕೆಯನ್ನು ಎರಡನೇ ಕಕ್ಷೆಗೇರಿಸುವ ಕಾರ್ಯ ಶುಕ್ರವಾರ ಮುಂಜಾನೆ ಪೂರ್ಣಗೊಂಡಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಶುಕ್ರವಾರ ಮುಂಜಾನೆ 1.08ರ ಸುಮಾರಿಗೆ ನೌಕೆಯಲ್ಲಿರುವ ಸಂಚಲನೆ ವ್ಯವಸ್ಥೆಯನ್ನು 883 ಸೆಕೆಂಡ್‌ಗಳ ಅವಧಿಗೆ ಬಳಸಿ ಬಾಹ್ಯಾಕಾಶವನ್ನು ಎರಡನೇ ಕಕ್ಷೆಗೆ ಏರಿಸಲಾಯಿತು. ಈ ಪ್ರಯತ್ನದಿಂದ ಬಾಹ್ಯಾಕಾಶವನ್ನು 251*54,829 ಕಿ.ಮೀ ಕಕ್ಷೆಯೊಳಗೆ ದೂಡಲಾಯಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮೂರನೇ ಹಂತದ ಕಕ್ಷೆ ಏರಿಸುವ ಕಾರ್ಯ ಜುಲೈ 29ರಂದು ಮಧ್ಯಾಹ್ನ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರಯಾನ 2 ಯಶಸ್ವಿಯಾದಲ್ಲಿ ಚಂದ್ರನ ಮೇಲೆ ಇಳಿದ ರಾಷ್ಟ್ರಗಳ ಪೈಕಿ ರಶ್ಯ, ಅಮೆರಿಕ, ಚೀನಾದ ನಂತರ ನಾಲ್ಕನೇ ಸ್ಥಾನದಲ್ಲಿ ಭಾರತ ನಿಲ್ಲಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News