ಆ.1 ರಂದು ತುಳುಕೂಟದಿಂದ ಆಟಿ ಅಮಾವ್ಯಾಸೆ

Update: 2019-07-29 17:09 GMT

ಬೆಂಗಳೂರು, ಜು.29: ತುಳುಕೂಟ ಆ.1 ರಂದು ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಶೇಷಾದ್ರಿಪುರ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಟಿ (ಆಷಾಢ) ಅಮಾವಾಸ್ಯೆ ಪ್ರಯುಕ್ತ ಉಚಿತ ರೋಗ ನಿರೋಧಕ ಪಾಲೆ ಮರದ ರಸವನ್ನು (ಕಷಾಯ ಅಥವಾ ಗಂಜಿ) ಔಷಧವಾಗಿ ಕುಡಿಯುವ ವಿಭಿನ್ನ ಆಚರಣೆಯನ್ನು ಆಯೋಜಿಸಿದೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಳುಕೂಟದ ಅಧ್ಯಕ್ಷ ಬಿ.ದಿನೇಶ್ ಹೆಗ್ಡೆ, ರೋಗ ನಿರೋಧಕ ಪಾಲೆ ಮರದ ರಸವು ಆಷಾಢ ಅಮಾವಾಸ್ಯೆ ದಿನದಂದು ಬೆಳಗ್ಗೆ ರಸವನ್ನು ಕುಡಿದರೆ ಆ ವರ್ಷದುದ್ದಕ್ಕೂ ಯಾವುದೇ ಕಾಯಿಲೆಗಳು ಬರುವುದಿಲ್ಲ ಎಂಬ ನಂಬಿಕೆ ಇದೆ. ಅಲ್ಲದೆ, ಮಧುಮೇಹ, ರಕ್ತದೊತ್ತಡ, ಹೊಟ್ಟೆಯ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕೆ.ಬಿ.ರಾಜೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಕೆ.ಅಜಿತ್ ಹೆಗ್ಡೆ ಉಪಸ್ಥತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News