ಬಿಬಿಎಂಪಿ ಕೌನ್ಸಿಲ್ ಸಭೆ: ಜಾಹೀರಾತು ಬೈಲಾ ನಿರ್ಧಾರಕ್ಕೆ ಸದಸ್ಯರ ವಿರೋಧ

Update: 2019-07-29 17:34 GMT

ಬೆಂಗಳೂರು, ಜು.29: ಜಾಹೀರಾತು 2018ರ ಬೈಲಾ, ಸಮಿತಿ ರಚನೆ ಸಂಬಂಧ ಸದಸ್ಯರ ಗಮನಕ್ಕೆ ತರದೆ ಸರಕಾರ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಬಿಬಿಎಂಪಿ ಸದಸ್ಯರು ಆರೋಪ ವ್ಯಕ್ತಪಡಿಸಿದರು.

ಸೋಮವಾರ ನಗರದ ಬಿಬಿಎಂಪಿಯ ಕೆಂಪೇಗೌಡ ಸಭಾಂಗಣದಲ್ಲಿ ಜಾಹೀರಾತು ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಕರೆದಿದ್ದ ವಿಶೇಷ ಕೌನ್ಸಿಲ್ ಸಭೆಯಲ್ಲಿ, ಜಾಹೀರಾತು ನೀತಿ ಬಗ್ಗೆ ಪ್ರಸ್ತಾಪಿಸಿ ಹಲವು ಸದಸ್ಯರು ಸಮ್ಮಿಶ್ರ ಸರಕಾರ ಈ ಸಂಬಂಧ ಕೈಗೊಂಡ ತೀರ್ಮಾನಗಳ ಬಗ್ಗೆ ವಿರೋಧಿಸಿದರು.

ನಮ್ಮ ಗಮನಕ್ಕೆ ತರದೆ ಬೈಲಾ ತಿದ್ದುಪಡಿ ಮಾಡಿ ಸ್ಥಳೀಯ ಆಡಳಿತವನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ. ಜಾಹೀರಾತು ನೀತಿ ಮಾಡಲಿಕ್ಕೆ ಸಾಧ್ಯವಾಗದಿದ್ದರೆ ವಾರ್ತಾ ಇಲಾಖೆಗೆ ಕೊಡಲಿ ಎಂದು ಸರಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯ ಗುಣಶೇಖರ್ ತಿರುಗಿ ಬಿದ್ದರು.

ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಈ ನೀತಿ ಸಂಬಂಧ ಡೀಮ್ಡ್ ಅಪ್ರೊವಲ್ ಆಗಿದ್ದು, ಕೂಡಲೇ ಇದನ್ನು ಕೈ ಬಿಡಬೇಕು. ಪಾಲಿಕೆಯ ಗಮನಕ್ಕೆ ತರದೆ ನೋಟಿಫಿಕೇಷನ್ ಹೊರಡಿಸಲಾಗಿದೆ. ಇದರಲ್ಲಿ ಕಾಣದ ಕೈವಾಡವಿದೆ. ನಮಗೂ ಶಕ್ತಿ ಇದೆ. ಅವಕಾಶ ಮಾಡಿಕೊಡಿ. ಅಲ್ಲದೆ, ಕಬ್ಬನ್ ಪಾರ್ಕ್‌ನಲ್ಲಿ ಹೇಗೆ ಎಲ್‌ಇಡಿ ಜಾಹೀರಾತಿಗೆ ಅವಕಾಶ ಕೊಟ್ಟಿದ್ದೀರಿ. ಕಸ ಎತ್ತಲು ಪರಿಸರ ಸಂರಕ್ಷಣೆ ಮಾಡಲು ನಮಗೂ ತಾಕತ್ತು ಇದೆ ಎಂದು ಹರಿಹಾಯ್ದರು.

2016 ರಲ್ಲಿ 331 ಕೋಟಿ ತೆರಿಗೆ ಬರಬೇಕು ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಇದರಿಂದ ಜಾಹೀರಾತುದಾರರು ನ್ಯಾಯಾಲಯದ ಮೊರೆ ಹೋದರು. ಬಳಿಕ ಪಾಲಿಕೆಯ ಬೊಕ್ಕಸಕ್ಕೆ 44 ಕೋಟಿ ರೂ. ಆದಾಯ ಬಂತು. ಈಗ ಪ್ರತಿ 30ರಿಂದ 40 ಕೋಟಿ ಆದಾಯ ಬರುತ್ತಿದೆ.

-ಅಬ್ದುಲ್ ವಾಜಿದ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News