ಬಕ್ರೀದ್ ಹಿನ್ನೆಲೆ: ಜಾನುವಾರುಗಳ ಜಪ್ತಿ ಮಾಡದಂತೆ ಅಲ್ಪಸಂಖ್ಯಾತರ ಆಯೋಗ ಮನವಿ

Update: 2019-08-08 16:32 GMT

ಬೆಂಗಳೂರು, ಆ.8: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬಲಿಕೊಡಲು(ಕುರ್‌ಬಾನಿ) ತೆಗೆದುಕೊಂಡು ಬರುವ ಜಾನುವಾರುಗಳನ್ನು ನಗರದ ವಿವಿಧ ಕಡೆ ಪೊಲೀಸರು ಜಪ್ತಿ ಮಾಡುತ್ತಿರುವ ಕುರಿತು ಹಲವಾರು ಸಂಘ ಸಂಸ್ಥೆಗಳು ದೂರು ನೀಡಿವೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವಾ ನೇತೃತ್ವದ ನಿಯೋಗವು ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದೆ.

ಗುರುವಾರ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಭೇಟಿ ಮಾಡಿದ ನಿಯೋಗವು, ಅನಗತ್ಯವಾಗಿ ಸಮಸ್ಯೆಗಳನ್ನು ಸೃಷ್ಟಿಸದಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಈ ಸಂಬಂಧ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿತು.

ಈ ವೇಳೆ ಮಾಜಿ ಸಚಿವ ನಸೀರ್ ಅಹ್ಮದ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಅನೀಸ್ ಸಿರಾಜ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News