‘ಅಧಿಕಾರಯುಕ್ತ ಸಮಿತಿ’ ಅನುಮೋದನೆ ನೀಡಿದ ಕಾಮಗಾರಿಗಳ ತನಿಖೆಗೆ ಸಿಎಂ ಆದೇಶ

Update: 2019-08-26 17:24 GMT

ಬೆಂಗಳೂರು, ಆ. 26: ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರೋತ್ಥಾನ ಅನುದಾನದಡಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಗಳ ಅನುಮೋದನೆಗೆ ರಚಿಸಿದ್ದ ‘ಅಧಿಕಾರಯುಕ್ತ ಸಮಿತಿ’ ಅನುಮೋದಿಸಿದ ಕಾಮಗಾರಿಗಳ ಗುಣಮಟ್ಟ ಮತ್ತು ಪ್ರಗತಿಯ ಬಗ್ಗೆ ತನಿಖೆ ನಡೆಸಿ ಮೂರು ತಿಂಗಳ ಒಳಗೆ ವರದಿ ಸಲ್ಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ.

2016ರ ನವೆಂಬರ್ 3ರಿಂದ 2019ರ ಜೂನ್ 30ರ ವರೆಗೆ ಸಾವಿರಾರು ಕೋಟಿ ರೂ.ಕಾಮಗಾರಿಗಳಿಗೆ ಅಧಿಕಾರಯುಕ್ತ ಸಮಿತಿ ಅನುಮೋದನೆ ನೀಡಿದ್ದು, ಬಹುತೇಕ ಕಾಮಗಾರಿಗಳಿಗೆ ಅವುಗಳ ಅಂದಾಜು ಮೊತ್ತಕ್ಕಿಂತಲೂ ಶೇ.32ಕ್ಕಿಂತಲೂ ಅಧಿಕ ಮೊತ್ತ ನಮೂದಿಸಿರುವ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಕಾರ್ಯಾದೇಶ ನೀಡಿರುವುದು ಗೊತ್ತಾಗಿದೆ.

ಈ ಸಂಬಂಧ ನಡೆದಿರಬಹುದಾದ ಅವ್ಯವಹಾರಗಳ ಬಗ್ಗೆ ಮತ್ತು ಅಧಿಕಾರಯುಕ್ತ ಸಮಿತಿಯಿಂದ ಮೇಲೆ ತಿಳಿಸಿದ ಅವಧಿಯಲ್ಲಿ ಅನುಮೋದನೆ ದೊರೆತು ನಿರ್ವಹಿಸಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ವರದಿ ನೀಡಬೇಕೆಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News