​ಜೂಜಾಟ; 19 ಮಂದಿ ಸೆರೆ

Update: 2019-09-01 11:34 GMT

ಬೆಂಗಳೂರು, ಸೆ.1: ಕಾನೂನು ಬಾಹಿರ ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಆರೋಪದಡಿ 19 ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 1 ಲಕ್ಷ ರೂ. ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಭಟ್ಟರಹಳ್ಳಿ ಸಮೀಪದ ಶಿರಡಿಸಾಯಿ ರಿಕ್ರಿಯೇಷನ್ ಅಸೋಶಿಯೇಷನ್ ಕ್ಲಬ್‌ನಲ್ಲಿ ಸದಸ್ಯರಲ್ಲದ ವ್ಯಕ್ತಿಗಳನ್ನು ಸೇರಿಸಿ ಜೂಜಾಟ ಆಡಿಸುತ್ತಾರೆಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ 19 ಜನರನ್ನು ಬಂಧಿಸಿ, ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News