ಎ.ಬಿ.ಇಬ್ರಾಹಿಂ, ಹೆಫ್ಸಿಬಾ ರಾಣಿ ಸೇರಿ 14 ಐಎಎಸ್ ಅಧಿಕಾರಿಗಳ ವರ್ಗಾವಣೆ

Update: 2019-09-06 14:37 GMT
ಎ.ಬಿ.ಇಬ್ರಾಹಿಂ, ಹೆಫ್ಸಿಬಾ ರಾಣಿ 

ಬೆಂಗಳೂರು, ಸೆ.6: ರಾಜ್ಯ ಸರಕಾರವು 14 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ- ಡಾ.ರಾಜ್‌ಕುಮಾರ್ ಖತ್ರಿ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಬಾಗಲಕೋಟೆ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ, ಪುನವರ್ಸತಿ ಆಯುಕ್ತ-ಅಮ್ಲಾನ್ ಆದಿತ್ಯ ಬಿಸ್ವಾಸ್.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಕಾರ್ಯದರ್ಶಿ- ಎ.ಬಿ.ಇಬ್ರಾಹಿಂ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ರಾಜ್ಯ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ-ಸಿ.ಶಿಖಾ.

ಹಟ್ಟಿ ಚಿನ್ನದ ಗಣಿ ಕಂಪೆನಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ-ಸಲ್ಮಾ ಕೆ.ಫಹೀಮ್, ಕಾರ್ಮಿಕ ಇಲಾಖೆ ಆಯುಕ್ತ-ಕೆ.ಜಿ.ಶಾಂತಾರಾಮ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ-ಅನಿರುದ್ಧ್ ಶ್ರವಣ್, ಬೆಂಗಳೂರು ಸ್ಮಾರ್ಟ್ ಸಿಟಿ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕಿ-ಹೆಫ್ಸಿಬಾ ರಾಣಿ ಕೋರ್ಲಪಾಟಿ.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತ-ಕೆ.ಶ್ರೀನಿವಾಸ್, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ-ಕೆ.ಲೀಲಾವತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೆಶಕಿ-ಡಾ.ಅರುಂಧತಿ ಚಂದ್ರಶೇಖರ್.

ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿಯ ನಿರ್ದೇಶಕ-ಎಂ.ಆರ್.ರವಿ ಕುಮಾರ್, ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ-ಎಂ.ಬಿ.ರಾಜೇಶ್ ಗೌಡ ಹಾಗೂ ರಾಜ್ಯ ವಸತಿ ಮಂಡಳಿಯ ಆಯುಕ್ತರನ್ನಾಗಿ ಡಿ.ಎಸ್.ರಮೇಶ್‌ರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News