ನ್ಯಾನೋ ತಂತ್ರಜ್ಞಾನ ಆವಿಷ್ಕಾರ ಅಪೂರ್ವ ಅವಕಾಶಗಳನ್ನು ತೆರೆಯಲಿದೆ: ಪ್ರೊ.ರಾಮಗೋಪಾಲ್

Update: 2019-09-07 16:34 GMT

ಬೆಂಗಳೂರು, ಸೆ.7: ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಸಂಶೋಧನೆ, ಆವಿಷ್ಕಾರಗಳು ದೇಶಕ್ಕೆ ಅಪೂರ್ವ ಅವಕಾಶಗಳನ್ನು ತೆರೆದುಕೊಡಲಿದ್ದು, ಇದಕ್ಕೆ ಪೂರಕವಾಗಿ ಸರಕಾರ ಸ್ಪಂದಿಸಿದ್ದಲ್ಲಿ ದೇಶವು ಜಗತ್ತಿನ ನ್ಯಾನೋ ತಂತ್ರಜ್ಞಾನದ ತೊಟ್ಟಿಲು ಎನಿಸಿಕೊಳ್ಳಲಿದೆ ಎಂದು ದಿಲ್ಲಿ ಐಐಟಿ ನಿರ್ದೇಶಕ ಪ್ರೊ.ರಾಮಗೋಪಾಲ್ ಹೇಳಿದರು.

ಶನಿವಾರ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ 25ನೇ ವರ್ಷದ ಮೂರು ದಿನಗಳ ಸುಧಾರಿತ ಕಂಪ್ಯೂಟಿಂಗ್ ಮತ್ತು ಸಂವಹನ ಅಂತರ್‌ರಾಷ್ಟ್ರೀಯ ಸಮ್ಮೇಳನದಲ್ಲಿ ಸಿಡಿಎಸಿ 2019 ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ವೈದ್ಯಕೀಯ ವಲಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹತ್ತರ ಸಂಶೋಧನೆಗಳು ನಡೆಯುತ್ತಿವೆ, ಹೃದಯಾಘಾತದಂತಹ ಸಮಯದಲ್ಲಿ ನಿಧಾನಗತಿಯ ರೋಗನಿರ್ಣಯವು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ, ಇದಕ್ಕೆ ಸಂಬಂಧಿಸಿ ಮೊಬೈಲ್ ಫೋನ್ ಗಾತ್ರವುಳ್ಳ ರೋಗ ನಿರ್ಣಯ ಯಂತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಕೇವಲ ಅರ್ಧ ಗಂಟೆಯಲ್ಲೇ ಡಯಗ್ನೋಸ್ ಮಾಡಬಹುದಾಗಿದೆ ಎಂದರು.

ಜಗತ್ತಿನಲ್ಲಿರುವ ಎಲ್ಲ ಸಮಸ್ಯೆಗಳು ದೇಶದಲ್ಲೇ ಇವೆ, ಸಂಶೋಧನಾ ಕ್ಷೇತ್ರಕ್ಕೆ ಪ್ರಭುತ್ವ ಹೆಚ್ಚಿನ ಗಮನ ನೀಡಿದ್ದಲ್ಲಿ, ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಅದ್ಭುತ ಸಾಧನೆ ಮಾಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಸ್ಮರಣಾರ್ಥ ವಿಶೇಷ ಅಂಚೆ ಮುದ್ರಿಕೆ ಬಿಡುಗಡೆ ಮಾಡಲಾಯಿತು. ಇನ್ನು ಕಾರ್ಯಕ್ರಮದಲ್ಲಿ ಡಾ.ಸರಗೂರು ಎಂ.ಶ್ರೀನಿಧಿ, ಡಾ.ಶ್ರೀನಿವಾಸನ್ ರಮಣಿ ಹಾಗೂ ಡಾ.ಸಡಗೊಪನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News