ಆನ್‌ಲೈನ್ ವೇಶ್ಯಾವಾಟಿಕೆ ದಂಧೆ: ಏಳು ಮಂದಿಯ ಬಂಧನ

Update: 2019-09-12 13:09 GMT

ಬೆಂಗಳೂರು, ಸೆ.12: ಅಕ್ರಮ ಹಣ ಸಂಪಾದನೆಗಾಗಿ ಆನ್‌ಲೈನ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಮಾಲಕ ಸೇರಿ ಏಳು ಮಂದಿಯನ್ನು ಬಂಧಿಸುವಲ್ಲಿ ಕಗ್ಗಲಿಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಬನಶಂಕರಿಯ ಸುಭಾಷ್, ನಾಗರಬಾವಿಯ ನರಸಿಂಹಮೂರ್ತಿ ಸೇರಿದಂತೆ 7 ಮಂದಿಯನ್ನು ಬಂಧಿಸಿ, ಆರೋಪಿಗಳ ದಂಧೆಗೆ ಮನೆ ಬಾಡಿಗೆ ನೀಡಿದ ಮಾಲಕ ರಾಮನಗರದ ಚಿನ್ನಪ್ಪ ಎಂಬಾತನ ವಿರುದ್ಧವೂ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News