ದ್ವಿಚಕ್ರ ವಾಹನಗಳ ಕಳವು ಪ್ರಕರಣ: ಓರ್ವನ ಬಂಧನ

Update: 2019-09-14 16:35 GMT

ಬೆಂಗಳೂರು, ಸೆ.14: ಮದ್ಯ ಸೇವನೆ ಆಸೆಗಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಬಂಧಿಸಿರುವ ಗಂಗಮ್ಮನಗುಡಿ ಠಾಣಾ ಪೊಲೀಸರು 3 ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ತ್ಯಾಮಗೊಂಡ್ಲುವಿನ ನವೀನ್(25) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ಯ ಸೇವನೆಯ ಆಸೆಗಾಗಿ ನವೀನ್ ಸುಲಭವಾಗಿ ಹಣ ಗಳಿಸಲು ದ್ವಿಚಕ್ರ ವಾಹನ ಕಳವು ದಂಧೆಗೆ ಇಳಿದಿದ್ದ. ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅನುಭವದ ಮೇಲೆ ನಕಲಿ ಕೀಗಳನ್ನು ಬಳಸಿ ಬೀಗ ತೆಗೆದು ಇಲ್ಲವೆ, ಹ್ಯಾಂಡಲ್ ಮುರಿದು ಕಳವು ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿ ವಿರುದ್ಧ 8ಕ್ಕೂ ಹೆಚ್ಚು ಬೈಕ್ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದ್ದು, ಈ ಸಂಬಂಧ ವಿವಿಧ ಕಂಪನಿಗಳ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News