ಪ್ರತಿಷ್ಠಿತ ಟೀ ಪುಡಿಯ ನಕಲಿ ಜಾಲ ಪತ್ತೆ: ಇಬ್ಬರ ಬಂಧನ

Update: 2019-09-25 14:40 GMT

ಬೆಂಗಳೂರು, ಸೆ.25: ಪ್ರತಿಷ್ಠಿತ ಹಿಂದೂಸ್ತಾನ್ ಲಿವರ್ ಲಿ.ಕಂಪೆನಿಯ ರೆಡ್ ಲೇಬಲ್ ಬ್ರೂಕ್ ಬಾಂಡ್ ತ್ರೀ ರೋಸಸ್ ನಕಲಿ ಟೀ ಪುಡಿ, ಪ್ಯಾಕಿಂಗ್ ಜಾಲವನ್ನು ಬೇಧಿಸಿರುವ ಬಂಡೆಪಾಳ್ಯ ಠಾಣಾ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.

ರಾಜಸ್ತಾನ ಮೂಲದ ಭವರ್ ಲಾಲ್ (26) ಹಾಗೂ ಜಗರಾಂ (40) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಬ್ರೂಕ್ ಬಾಂಡ್ ರೆಡ್ ಲೇಬಲ್ ತ್ರೀ ರೋಸಸ್ ಹೆಸರಿನ 2,497 ಕೆಜಿ ನಕಲಿ ಟೀ ಪುಡಿ ಜಪ್ತಿ ಮಾಡಲಾಗಿದ್ದು, ಟೀ ಪುಡಿ ಪ್ಯಾಕಿಂಗ್ ಯಂತ್ರ, ಲೇಬಲ್‌ಗಳು ಸೇರಿ 30 ಲಕ್ಷ ರೂ. ಮೌಲ್ಯದ ಮಾಲು ವಶಕ್ಕೆ ಮಾಡಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ತಿಳಿಸಿದ್ದಾರೆ.

ಆರೋಪಿಗಳು ಕಳೆದ ಎರಡು ವರ್ಷಗಳಿಂದ ನಕಲಿ ಟೀ ಪುಡಿಯನ್ನು ಹಿಂದೂಸ್ತಾನ್ ಲಿ.ಕಂಪೆನಿಯ ಟೀ ಪುಡಿ, ಲೇಬಲ್, ಬಾಕ್ಸ್ ಬಳಸಿ ಮಾರಾಟ ಮಾಡುತ್ತಿದ್ದರು.ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜಪ್ತಿ ಮಾಡಿದ ಟೀ ಪುಟಿ ಕುರಿತು ತನಿಖೆ ಕೈಗೊಂಡಾಗ ಇದರಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News