ತುಮಕೂರಿಗೆ ರೈಲು ಸಂಚಾರಕ್ಕೆ ಮುಂದಾದ ರೈಲ್ವೆ ಇಲಾಖೆ

Update: 2019-09-29 17:23 GMT

ಬೆಂಗಳೂರು, ಸೆ.29: ಯಶವಂತಪುರ-ತುಮಕೂರು ಮಾರ್ಗದಲ್ಲಿ ಡೆಮು ವಿಶೇಷ ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ಸೆ.30ರಿಂದ ಈ ರೈಲು ಸಂಚಾರ ಆರಂಭವಾಗಲಿದ್ದು, ರವಿವಾರ ಹೊರತುಪಡಿಸಿ ವಾರದ ಆರು ದಿನಗಳು ರೈಲು ಸಂಚರಿಸಲಿದೆ. ರಾತ್ರಿ 7:50ಕ್ಕೆ ಯಶವಂತಪುರದಿಂದ ಹೊರಟು, ರಾತ್ರಿ 9:25 ತುಮಕೂರು ತಲುಪಲಿದೆ.

ಚಿಕ್ಕಬಾಣಾವರ, ಸೋಲದೇವನಹಳ್ಳಿ, ಗೊಲ್ಲಹಳ್ಳಿ, ಭೈರನಾಯಕನಹಳ್ಳಿ, ದೊಡ್ಡಬೆಲೆ, ಮುದ್ದಲಿಂಗಹಳ್ಳಿ, ನಿಡುವಂದ, ದಾಬಾಸ್‌ಪೇಟೆ, ಹಿರೇಹಳ್ಳಿ ಮತ್ತು ಕ್ಯಾತಸಂದ್ರದಲ್ಲಿ ರೈಲು ನಿಲುಗಡೆಗೆ ಅವಕಾಶ ಇದೆ. ರಾತ್ರಿ 9:50ಕ್ಕೆ ತುಮಕೂರಿನಿಂದ ಹೊರಡುವ ರೈಲು ರಾತ್ರಿ 10:44ಕ್ಕೆ ಯಶವಂತಪುರಕ್ಕೆ ತಲುಪಲಿದೆ ಎಂದು ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ಪ್ರಕಟನೆಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News