ಕೈಗಾರಿಕಾ ಪ್ರದೇಶಗಳನ್ನು ಟೌನ್‌ಶಿಪ್‌ಗಳಾಗಿ ಘೋಷಿಸಿ: ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ್

Update: 2019-10-03 17:23 GMT

ಬೆಂಗಳೂರು, ಅ.3: ಸಂವಿಧಾನದ 74ಪರಿಚ್ಛೇದ(ತಿದ್ದುಪಡಿ)ದಂತೆ ಕೈಗಾರಿಕಾ ಪ್ರದೇಶಗಳನ್ನು ಟೌನ್‌ಶಿಪ್‌ಗಳಾಗಿ ಘೋಷಣೆ ಮಾಡಬೇಕೆಂದು ಎಫ್‌ಕೆಸಿಸಿಐ ಅಧ್ಯಕ್ಷ ಅಧ್ಯಕ್ಷ ಸಿ.ಆರ್.ಜನಾರ್ದನ್ ಹೇಳಿದ್ದಾರೆ.

ಗುರುವಾರ ಎಫ್‌ಕೆಸಿಸಿಐ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 1993ರಲ್ಲಿ ಕೇಂದ್ರ ಸರಕಾರ ಸಂವಿಧಾನದ 74ನೆ ಪರಿಚ್ಛೇದಕ್ಕೆ ತಿದ್ದುಪಡಿ ತಂದು ಅಂಗೀಕರಿಸಿದ್ದರಿಂದ ಟೌನ್‌ಶಿಪ್‌ಗಳ ಘೋಷಣೆಯಾಗಿದೆ. ಹೀಗಾಗಿ, ರಾಜ್ಯದಲ್ಲಿರುವ ಕೈಗಾರಿಕಾ ಪ್ರದೇಶಗಳನ್ನು ಕೈಗಾರಿಕಾ ಟೌನ್‌ಶಿಪ್‌ಗಳಾಗಿ ಘೋಷಣೆ ಮಾಡಬೇಕೆಂದು ಹೇಳಿದರು.

ಪೀಣ್ಯ, ಬೊಮ್ಮಸಂದ್ರ, ವೈಟ್‌ಫೀಲ್ಡ್, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೈಸೂರು, ಶಿವಮೊಗ್ಗ, ದಾವಣಗೆರೆ, ಕಲಬುರಗಿ ಮುಂತಾದ ಸ್ಥಳಗಳಲ್ಲಿರುವ ಕೈಗಾರಿಕಾ ಪ್ರದೇಶಗಳನ್ನು ಟೌನ್‌ಶಿಪ್‌ಗಳಾಗಿ ಘೋಷಿಸಬೇಕು. ಇದರಿಂದಾಗಿ, ಅಲ್ಲಿ ಸಂಗ್ರಹವಾಗುವ ಆರ್ಥಿಕ ಸಂಪನ್ಮೂಲದಲ್ಲಿ ಸ್ಥಳೀಯ ಆಡಳಿತಕ್ಕೆ ಶೇ.60ರಷ್ಟು, ಟೌನ್ ಶಿಪ್ ಅಭಿವೃದ್ಧಿಗೆ ಶೇ.40ರಷ್ಟು ಹಂಚಿಕೆಯಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News