ದ.ಕ.: ದಿನವಿಡೀ ಮಳೆ; ಮೋಡ ಕವಿದ ವಾತಾವರಣ; ಅ.24ರಂದೂ ಮಳೆ ಸಾಧ್ಯತೆ
Update: 2019-10-23 14:37 GMT
ಮಂಗಳೂರು, ಅ.23: ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದಂತೆ ದ.ಕ.ಜಿಲ್ಲಾದ್ಯಂತ ಬುಧವಾರ ಮೋಡ ಕವಿದ ವಾತಾವರಣದ ಮಧ್ಯೆ ದಿನವಿಡೀ ಮಳೆ ಸುರಿದಿದೆ.
ಗುಡುಗು ಸಿಡಿಲಿನ ಆರ್ಭಟವಿಲ್ಲದಿದ್ದರೂ ಬಧವಾರ ಮುಂಜಾನೆಯಿಂದ ರಾತ್ರಿಯವರೆಗೂ ಮಳೆ ಸುರಿದಿದ್ದು, ಮೋಡ ಕವಿಯುವ ಮೂಲಕ ಎಲ್ಲೆಡೆ ತಂಪಗಿನ ವಾತಾವರಣವಿತ್ತು. ಶುಕ್ರವಾರವೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ.
ದ.ಕ.ಜಿಲ್ಲೆಯ ಬಂಟ್ವಾಳ, ಮೂಡುಬಿದಿರೆ, ಮುಲ್ಕಿ, ಉಳ್ಳಾಲ, ಪುತ್ತೂರು, ಬೆಳ್ತಂಗಡಿ, ಸುಳ್ಯದಲ್ಲೂ ಮಳೆಯಾಗಿದೆ. ಮೀನುಗಾರಿಕಾ ಇಲಾಖೆಯು ಮೀನುಗಾರಿಕೆಗೆ ತೆರಳದಂತೆ ಸೂಚಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ಲೈಫ್‌ಗಾರ್ಡ್‌ನವರು ಅಪಾಯ ತಡೆಗಟ್ಟಲು ಸನ್ನದ್ಧರಾಗಿದ್ದಾರೆ. ಬುಧವಾರ ಸಮುದ್ರದ ಅಲೆಯ ಅಬ್ಬರ ಹೆಚ್ಚಾಗಿತ್ತು. ದಿನವಿಡೀ ಸಾಧಾರಣ ಮಳೆ ಸುರಿದರೂ ಯಾವುದೇ ಗಂಭೀರ ಹಾನಿ ಎಲ್ಲೂ ಆದ ಬಗ್ಗೆ ವರದಿಯಾಗಿಲ್ಲ.