ಮಂಗಳೂರು: ಮೊದಲ ವಿಶ್ವ ಕನ್ನಡ ಡಿಜಿಟಲ್ ಸಾಹಿತ್ಯ ಸಮ್ಮೇಳನ

Update: 2019-10-23 15:05 GMT

ಮಂಗಳೂರು, ಅ.23: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದೊಂದಿಗೆ 2020ರ ಫೆ.13ರಿಂದ 15ರವರೆಗೆ ವಿಶ್ವ ಕನ್ನಡ ಡಿಜಿಟಲ್ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ಏರ್ಪಡಿಸಲು ನಿರ್ಧರಿಸಿದೆ.

ಸಮ್ಮೇಳನದಲ್ಲಿ 204 ಕವಿ-ಕವಯತ್ರಿಯರಿಗೆ, 60 ಕಥೆಗಾರರು ಹಾಗೂ 15 ಚಿತ್ರಕಲಾವಿದರಿಗೆ ಅವಕಾಶವಿದೆ. ಸಮ್ಮೇಳನವು ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಸಮ್ಮೇಳನವಾಗಿದ್ದು, ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಕವಿಗಳು, ಕಥೆಗಾರರು ವೀಡಿಯೊ ಕಾನ್ಫರೆನ್ಸ್ ಮೂಲಕವೇ ಕವಿತೆ, ಕಥೆ ಮತ್ತು ಕಲಾಕೌಶಲ್ಯಗಳನ್ನು ಪ್ರಸ್ತುತಪಡಿಸಲಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಪ್ರಯತ್ನ ಮೊಟ್ಟ ಮೊದಲ ಬಾರಿ ನಡೆಯುತ್ತಿದ್ದು, ಈ ಸಮ್ಮೇಳನವನ್ನು ವಿಶಿಷ್ಟವಾಗಿ ನಡೆಸಲು ಸಂಸ್ಥೆಯು ನಿರ್ಧರಿಸಿದೆ.

ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಪ್ರಪಂಚದಾದ್ಯಂತ ಇರುವ ಕನ್ನಡದ ಕವಿಗಳು ತಮ್ಮ ಎರಡು ಕವಿತೆಗಳನ್ನು, ಕಥೆಗಾರರು ಒಂದು ಕಥೆಯನ್ನು, ಚಿತ್ರಕಲಾವಿದರು ಪ್ರಸ್ತುತಪಡಿಸುವ ಕೃತಿಯ ಮಾಹಿತಿಯನ್ನು ತಮ್ಮ ಪರಿಚಯದೊಂದಿಗೆ ಕಳುಹಿಸಿಕೊಡುವುದಲ್ಲದೆ, ಅದೇ ವಿವರವನ್ನು ಮಿಂಚಂಚೆಗೆ ಡಿಸೆಂಬರ್ 24ರೊಳಗೆ ತಲುಪಿಸಬೇಕು.
ಸಾಹಿತಿ, ಕಲಾವಿದರು ಕಡ್ಡಾಯವಾಗಿ ಆ್ಯಂಡ್ರಾಯ್ಡಾ ಮೊಬೈಲ್ ಹೊಂದಿರಬೇಕು. ಸಮ್ಮೇಳನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರತಿಷ್ಠಾನದ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ (9108425813) ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News