ಐರಿನ್ ರೆಬೆಲ್ಲೊಗೆ ಕಲಾಕಾರ್ ಪುರಸ್ಕಾರ

Update: 2019-10-24 16:50 GMT

ಮಂಗಳೂರು, ಅ.24: ಕಾರ್ವಾಲ್ ಘರಾಣೆಂ ಮಾಂಡ್ ಸೊಭಾಣ್ ಸಹಕಾರದಲ್ಲಿ ನೀಡುವ 15ನೇ ಸಾಲಿನ ಕಲಾಕಾರ್ ಪುರಸ್ಕಾರಕ್ಕೆ ಐರಿನ್ ರೆಬೆಲ್ಲೊ (ಡಿಕುನ್ಹ) ಆಯ್ಕೆಯಾಗಿದ್ದಾರೆ.

ಐರಿನ್ ಕೊಂಕಣಿ ಮದುವೆ ಹಾಡುಗಳಾದ ವೋಯೊ ವೇರ್ಸ್‌ ಬಗ್ಗೆ ಊರೂರುಗಳಲ್ಲಿ ಕಾರ್ಯಾಗಾರ ನಡೆಸಿ, ತರಬೇತಿ ನೀಡಿ, ಈ ಜನಪದ ಪ್ರಕಾರವನ್ನು ಉಳಿಸಿ, ಬೆಳೆಸುವ ಕೆಲಸವನ್ನು ಕಳೆದ 15 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ತನ್ನದೇ ತಂಡ ಕಟ್ಟಿಕೊಂಡು ಕ್ರೈಸ್ತರ ರೋಸ್ ಸಂಭ್ರಮಗಳಲ್ಲಿ ಹಾಡುತ್ತಾರೆ. ಈ ವಿಷಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ‘ಭಾಯ್ಲ್ಯೆನ್ ಆಯ್ಲೆ ವ್ಹೊರ್’ ಹಾಗೂ ‘ಆಪ್ರೊಸಾಚಿ ವಾಟ್ಲಿ’ ಎಂಬ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.

ಪುರಸ್ಕಾರವು 25,000 ರೂ., ಸ್ಮರಣಿಕೆ, ಶಾಲು, ಫಲಪುಷ್ಪಹಾಗೂ ಸನ್ಮಾನ ಪತ್ರ ಒಳಗೊಂಡಿದೆ. 2019ರ ನವೆಂಬರ್ 3ರಂದು ಸಂಜೆ 6 ಗಂಟೆಗೆ ಕಲಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂದೇಶ ಪ್ರತಿಷ್ಟಾನದ ನಿರ್ದೇಶಕ ವಂ. ಫ್ರಾನ್ಸಿಸ್ ಆಸ್ಸಿಸಿ ಆಲ್ಮೇಡಾ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News