ಬೊಳ್ಳೂರು: ಫೆ. 4ರಿಂದ 37ನೇ ರಿಫಾಯ್ಯಿಯಾ ದಪ್ ರಾತೀಬ್

Update: 2019-10-25 05:25 GMT

ಹಳೆಯಂಗಡಿ : ಮುಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು ಹಳೆಯಂಗಡಿ ಇದರ ಅಂಗ ಸಂಸ್ಥೆಯಾಗಿರುವ ಲಿಯಾವುಲ್ ಇಸ್ಲಾಂ ಧಪ್ಪ್ ಕಮಿಟಿಯ 37ನೇ ವಾರ್ಷಿಕ ರಿಫಾಯ್ಯಿಯಾ ಧಪ್ ರಾತಿಬ್  ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮವು 2020 ಫೆಬ್ರವರಿ 4 ರಿಂದ ಫೆ.‌8ರ ವರೆಗೆ ನಡೆಯಲಿದೆ.

ಫೆಬ್ರವರಿ 4, 5, 6 ರಂದು ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ನಡೆಯಲಿದ್ದು, ಫೆ. 7ರಂದು ಹೊನಲು ಬೆಳಕಿನ ಧಪ್ಪ್ ಸ್ಪರ್ಧಾಕೂಟ ನಡೆಯಲಿದೆ. ಫೆ. 8 ರಂದು ವಾರ್ಷಿಕ ಧಪ್ಪ್ ರಾತಿಭ್ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮವು ಲಿಯಾವುಲ್ ಇಸ್ಲಾಂ ಧಪ್ಪ್ ಕಮಿಟಿಯ ವಠಾರದಲ್ಲಿ ನಡೆಯಲಿದೆ ಎಂದು ದಪ್ ಕಮಿಟಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News