ಉಪ ಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ

Update: 2019-10-25 16:09 GMT

ಉಡುಪಿ, ಅ.25: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಡುಪಿ ತಾಪಂ 4ನೇ ಬಾರ್ಕೂರು ಕ್ಷೇತ್ರದ ಹಾಗೂ ಕಾಪು ತಾಲೂಕು ಕಟಪಾಡಿ, ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ, ಕಾರ್ಕಳ ತಾಲೂಕಿನ ಮುಂಡ್ಕೂರು ಹಾಗೂ ಕಲ್ಯಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಉಪಚುನಾವಣೆ ನಡೆಯಲಿದ್ದು, ಈ ಎಲ್ಲಾ ಗ್ರಾಪಂ ಗಳ ವ್ಯಾಪ್ತಿಯಲ್ಲಿ ಅ. 28ರಿಂದ ನವೆಂಬರ್ 14ರವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.

ಚುನಾವಣೆ ಶಾಂತ ಮತ್ತು ಮುಕ್ತವಾಗಿ ನಡೆಯಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮೇಲೆ ಹೇಳಿದ ಎಲ್ಲಾ ಗ್ರಾಮ ಪಂಚಾಯತ್‌ಗಳ ಹಾಗೂ ಬಾರ್ಕೂರು ತಾಲೂಕು ಪಂಚಾಯತ್‌ನ ಕ್ಷೇತ್ರ ವ್ಯಾಪ್ತಿಯಲ್ಲಿ ಒಣದಿನವೆಂದು ಘೋಷಿಸಿ, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ದಿನಗಳಂದು ಮೇಲೆ ತಿಳಿಸಿರುವ ಗ್ರಾಪಂ ಹಾಗೂ ಬಾರ್ಕೂರು ತಾಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸನ್ನದುಗಳನ್ನು ಮುಚ್ಚಿ ಮೊಹರು ಮಾಡಿ ಅವುಗಳ ಕೀಯನ್ನು ಸಂಬಂಧಪಟ್ಟ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳ ವಶಕ್ಕೆ, ಉಡುಪಿ ಡೆಪ್ಯೂಟಿ ಕಮಿಷನರ್ ಆಪ್ ಎಕ್ಸೈಸ್ ಇವರಿಗೆ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News