ಪುದು ಶಾಲೆಯ ಸಮುದಾಯದತ್ತ ಶಾಲೆ-ಸೈಕಲ್ ವಿತರಣೆ

Update: 2019-10-26 07:48 GMT

ಬಂಟ್ವಾಳ, ಅ.26: ದ.ಕ. ಜಿಪಂ ಪುದು ಮಾಪ್ಲ ಹಿರಿಯ ಪ್ರಾಥಮಿಕ ಶಾಲೆಯ ಸಮುದಾಯದತ್ತ ಶಾಲೆ ಹಾಗೂ ಸೈಕಲ್ ವಿತರಣೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಟುಡೇ ಫೌಂಡೇಶನ್‌ನ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸರಕಾರಗಳು ನೀಡುವಂತಹ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆ ಸುಶಿಕ್ಷಿತರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಶಿಕ್ಷಣ ಪಡೆದ ನಂತರ ವಿದ್ಯಾರ್ಥಿಗಳು, ಪೋಷಕರ ನಿರಂತರ ಶಾಲೆಯ ಸಂಪರ್ಕವನ್ನು ಇಟ್ಟುಕೊಳ್ಳುವುದರ ಮುಖಾಂತರ ಶಾಲೆಯ ಎಲ್ಲ ರೀತಿಯ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಮ್ಲಾನ್ ಕುಂಪನಮಜ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಹನೀಫ್ ಅಮೆಮಾರ್, ರಝಾಕ್, ಟುಡೇ ಫೌಂಡೇಶನ್ ಸದಸ್ಯ ಮಜೀದ್ ಫರಂಗಿಪೇಟೆ, ಅಬೂಬಕರ್ ಫರಂಗಿಪೇಟೆ, ಪ್ರಭಾ ಟೀಚರ್, ಸಮೀರ್ ಕುಂಪನಮಜಲ್ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಶಕುಂತಲಾ ಸ್ವಾಗತಿಸಿದರು. ಶಿಕ್ಷಕರಾದ ಸುನೀತಾ ವಂದಿಸಿದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News