ಬಾರಕೂರು ಉಪಚುನಾವಣೆ ವೇಳಾಪಟ್ಟಿ

Update: 2019-10-26 14:44 GMT

ಉಡುಪಿ, ಅ.26: ತಾಲೂಕಿನ ಬಾರ್ಕೂರು ತಾಲೂಕು ಪಂಚಾಯತ್ ಹಾಗೂ ಬಿಲ್ಲಾಡಿ ಗ್ರಾಪಂ ಉಪಚುನಾವಣೆಗೆ ಅ.28ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅ.31 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ.2 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂದೆಗೆದುಕೊಳ್ಳಲು ನ.4 ಕೊನೆಯ ದಿನವಾಗಿದೆ. ನ.12ರಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ನ.14ರಂದು ಮತ ಎಣಿಕೆ ನಡೆಯಲಿದೆ.

ಬಾರ್ಕೂರು ತಾಪಂ ಕ್ಷೇತ್ರಕ್ಕೆ ಸಂಬಂಧಿಸಿದ ನಾಮಪತ್ರವನ್ನು, ಚಾಂತಾರು ಗ್ರಾಪಂ ಮೀಟಿಂಗ್ ಹಾಲ್‌ನಲ್ಲಿ ಮತ್ತು ಬಿಲ್ಲಾಡಿ ಗ್ರಾಪಂ ಕ್ಷೇತ್ರಕ್ಕೆ ಸಂಬಂಧಿಸಿದ ನಾಮಪತ್ರವನ್ನು ಬಿಲ್ಲಾಡಿ ಗ್ರಾಪಂ ಕಚೇರಿಯಲ್ಲಿ ಸ್ವೀಕರಿಸಲಾಗುವುದು ಎಂದು ಬ್ರಹ್ಮಾವರ ತಹಶೀಲ್ದಾರ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News