ಪಾದುವ ಥಿಯೇಟರ್ ಹಬ್ ವತಿಯಿಂದ 'ಉರುಳು ನಾಟಕ' ಪ್ರದರ್ಶನ
Update: 2019-10-27 11:03 GMT
ಮಂಗಳೂರು: ಪಾದುವ ಥಿಯೇಟರ್ ಹಬ್ ವತಿಯ ನಾಲ್ಕನೆ ವಾರಾಂತ್ಯದ ನಾಟಕ, ಸದಾನಂದ ಸುವರ್ಣ ನಿರ್ದೇಶನದ ಸುವರ್ಣ ಪ್ರತಿಷ್ಟಾನ ಮಂಗಳೂರು ತಂಡದ 'ಉರುಳು ನಾಟಕ' ಶನಿವಾರ ಸಂಜೆ ಪಾದುವ ಕಾಲೇಜಿನಲ್ಲಿ ಪ್ರದರ್ಶನಗೊಂಡಿತು.
ಚಲನಚಿತ್ರ ನಟ ಚಂದ್ರಹಾಸ್ ಉಳ್ಳಾಲ್, ಲಕ್ಷ್ಮಣ ಕುಮಾರ ಮಲ್ಲೂರು, ಸುಧಾಕರ್ ಸಾಲಿಯಾನ್ ಪಾತ್ರಕ್ಕೆ ಜೀವ ತುಂಬಿದರು.
ಹಿರಿಯ ರಂಗಕರ್ಮಿ ಸುದೇಶ್ ಮಹಾನ್ ನಾಟಕಕ್ಕೆ ಶುಭಕೋರಿ ಮಾತನಾಡಿದರು. ನಾಟಕದ ನಂತರ ನಾಟಕದ ನಿರ್ದೇಶಕರಾದ ಸದಾನಂದ ಸುವರ್ಣ ಹಾಗೂ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿದರು. ಈ ಸಂದರ್ಭದಲ್ಲಿ ಕೆಡೋನೆನ್ಸ್ ಹಾಗೂ ನೀನಾಸಂ ತಿರುಗಾಟ ನಾಟಕದ ಪೋಸ್ಟರನ್ನು ನಿರ್ದೇಶಕ ಸದಾನಂದ ಸುವರ್ಣ ಬಿಡುಗಡೆಗೊಳಿಸಿದರು.