ಅ.28: ಮಂಜೇಶ್ವರ ನೂತನ ಶಾಸಕ ಖಮರುದ್ದೀನ್ ಪ್ರಮಾಣ ವಚನ ಸ್ವೀಕಾರ

Update: 2019-10-27 13:51 GMT

ಕಾಸರಗೋಡು: ಮಂಜೇಶ್ವರ ನೂತನ ಶಾಸಕ ಎಂ.ಸಿ ಖಮರುದ್ದೀನ್ ಅ.28ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ರಾಜ್ ಭವನದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಖಮರುದ್ದೀನ್ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಶಾಸಕರಾಗಿದ್ದ ಪಿ. ಬಿ ಅಬ್ದುಲ್ ರಝಾಕ್ ಅವರ ನಿಧನದ ಹಿನ್ನಲೆಯಲ್ಲಿ ಅ.21ರಂದು ನಡೆದ ಉಪಚುನಾವಣೆಯಲ್ಲಿ 7923 ಮತಗಳ ಅಂತರದಿಂದ ಖಮರುದ್ದೀನ್ ಗೆಲುವು ಸಾಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News