ಮಂಜೇಶ್ವರ ನೂತನ ಶಾಸಕ ಖಮರುದ್ದೀನ್ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ

Update: 2019-10-28 06:23 GMT

ಕಾಸರಗೋಡು : ಮಂಜೇಶ್ವರದ ನೂತನ ಶಾಸಕ ಎಂ.ಸಿ ಖಮರುದ್ದೀನ್ ಶಾಸಕರಾಗಿ ಸೋಮವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದರು. ಈ ಸಂದರ್ಭ ಖಮರುದ್ದೀನ್ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರು, ಯುಡಿಎಫ್ ಮುಖಂಡರು ಉಪಸ್ಥಿತರಿದ್ದರು.

ಮೊದಲ ಬಾರಿ ಖಮರುದ್ದೀನ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶಾಸಕರಾಗಿದ್ದ ಪಿ. ಬಿ ಅಬ್ದುಲ್ ರಝಾಕ್  ನಿಧನದಿಂದ ತೆರವಾಗಿದ್ದ  ಕ್ಷೇತ್ರಕ್ಕೆ  ಅ.21ರಂದು ನಡೆದ ಉಪಚುನಾವಣೆಯಲ್ಲಿ 7923 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News