ಹೊಸಬೆಳಕು ಆಶ್ರಮ ನಿವಾಸಿಗಳೊಂದಿಗೆ ದೀಪಾವಳಿ ಆಚರಣೆ

Update: 2019-10-28 14:46 GMT

ಮಣಿಪಾಲ, ಅ.28: ವಿದ್ಯಾರ್ಥಿಗಳು ಪಬ್, ಮಾಲ್ಗಳಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ಸಮಾಜದಲ್ಲಿ ಅವಶ್ಯಕತೆಗಳಿಗಾಗಿ ಅರಸುತ್ತಿ ರುವ ವ್ಯಕ್ತಿಗಳ ಜೊತೆ ಬೆರೆತು ಅವರ ನೋವುಗಳಿಗೆ ಸ್ಪಂದಿಸಿದಾಗ ಸಾರ್ಥಕ ಮನೋಭಾವನೆಯನ್ನು ಕಂಡುಕೊಳ್ಳಬಹುದು ಮತ್ತು ಇದರಿಂದ ವಿದ್ಯಾರ್ಥಿ ಜೀವನದಿಂದ ಪ್ರಬುದ್ಧ ನಾಗರಿಕನಾಗಿ ಹೊರ ಬರಲು ಸಹಕಾರಿಯಾಗುತ್ತದೆ ಎಂದು ಸಹಕಾರಿ ಭಾರತಿ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ ಹೇಳಿದ್ದಾರೆ.

ಮಣಿಪಾಲದ ಹೊಸಬೆಳಕು ಸೇವಾ ಆಶ್ರಮದಲ್ಲಿ ರೋಟರಿ ಕ್ಲಬ್ ಉಡುಪಿ ರಾಯಲ್ ಮತ್ತು ರೋಟರಾಕ್ಟ್ ಕ್ಲಬ್ ಮಣಿಪಾಲ ಸಹಯೋಗ ದೊಂದಿಗೆ ಶನಿವಾರ ಆಯೋಜಿಸಲಾದ ಆಶ್ರಮದ ನಿವಾಸಿಗಳ ಜೊತೆ ದೀಪಾವಳಿ ಆಚರಣೆ ಮತ್ತು ಸಹಭೋಜನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ತ್ರಿಕಣ್ಣೇಶ್ವರಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ತೇಜೇಶ್ವರ್ ರಾವ್ ಮಾತನಾಡಿ, ಮಕ್ಕಳು ತಮ್ಮನ್ನು ಪೋಷಿಸಿ ಸಾಕಿ ಸಲಹಿ ಸಮಾಜದಲ್ಲಿ ಸುಸಂಸ್ಕ್ರತ ನಾಗರಿಕರನ್ನಾಗಿ ಮಾಡಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ ಹೆತ್ತವರನ್ನು ಅವರ ಇಳಿ ವಯಸ್ಸಿನಲ್ಲಿ ಮಕ್ಕಳಂತೆ ಪೋಷಿಸಿ ಗೌರವ ದಿಂದ ಕಾಣಬೇಕು. ಆಗ ವೃದ್ಧಾಶ್ರಮಗಳ ಅಸ್ತಿತ್ವದ ಅಗತ್ಯವೇ ಇರಲಾರದು ಎಂದು ಹೇಳಿದರು.

ರಾಯಲ್ ಅಧ್ಯಕ್ಷ ಯಶವಂತ್ ಬಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ರತ್ನಾಕರ್ ಇಂದ್ರಾಳಿ, ನಗರಸಭಾ ಸದಸ್ಯರಾದ ವಿಜಯಲಕ್ಷ್ಮೀ, ಮಂಜುನಾಥ್ ಮಣಿಪಾಲ, ರೋಟರಾಕ್ಟ್ ಪ್ರತಿನಿಧಿಗಳಾದ ದಿವ್ಯೆಶ್ ರಾಯ್, ವೈಷ್ಣವಿ, ಹೊಸಬೆಳಕು ಟ್ರಸ್ಟ್ನ ವ್ಯವಸ್ಥಾಪಕ ತನುಲಾ ತರುಣ್, ವಿನಯಚಂದ್ರ, ಕಲಾವಿದ ಶ್ರೀನಾಥ್ ಮಣಿಪಾಲ, ಅಲ್ವಿನ್ ಅಂದ್ರಾದೆ, ವೇಣುಗೋಪಾಲ್ ಕೆಂಜೂರ್, ಗುರುಪ್ರಸಾದ್ ಪಾಲನ್, ಜ್ಯೋತಿ ಕೃಷ್ಣಮೂರ್ತಿ, ವಿಜಯ ಕುಮಾರ್, ಸತೀಶ್ ಜತ್ತನ್, ರೂಪ ಸರಳಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News