​ಮನಪಾ ಚುನಾವಣೆಗೆ ಜೆಡಿಎಸ್ ಸ್ವತಂತ್ರ ಸ್ಪರ್ಧೆ

Update: 2019-10-28 14:50 GMT

ಮಂಗಳೂರು, ಅ. 28: ಮಂಗಳೂರು ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೆ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ 60 ವಾರ್ಡ್‌ಗಳ ಪೈಕಿ 20 ವಾರ್ಡ್‌ಗಳಿಗೆ ಈಗಾಗಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟು ಸುಮಾರು 25 ವಾರ್ಡ್‌ಗಳಲ್ಲಿ ಸ್ಪರ್ಧಿಗಳನ್ನು ಕಣಕ್ಕಿಳಿಸುವ ಗುರಿ ಇದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಯಲ್ಲಿ ಕಳೆದ ಬಾರಿ ಎರಡು ಅಭ್ಯರ್ಥಿಗಳು ಜಯಗಳಿಸಿದ್ದರು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತಜಗ್ತಗು ಜೆಡಿಎಸ್ ಎರಡು ಪಕ್ಷಗಳು ಇಲ್ಲಿ ಆಡಳಿತ ನಡೆಸಿವೆ ಆದರೆ ಪಾಲಿಕೆಯ ವ್ಯಾಪ್ತಿಯಲ್ಲಿನ ಪಚ್ಚನಾಡಿ ಡಂಪಿಂಗ್ ಯಾರ್ಡ್ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಮನಹರಿಸದೆ ಇರುವುದರಿಂದ ಮಹಾನಗರ ಪಾಲಿಕೆಯ ಜನರು ಇನ್ನಷ್ಟು ಸಮಸ್ಯೆ ಎದುರಿಸುಂವಾತಗಿದೆ. ಹಾಲಿ ರಾಜ್ಯದಲ್ಲಿರುವ ಸರಕಾರ ಬಹುತೇಕ ನಿಷ್ಕ್ರೀಯವಾಗಿದೆ. ಅಧಿಕಾರಿಗಳ ವರ್ಗಾವಣೆ ಹೊರತಾಗಿ ಜನರ ಸಮಸ್ಯೆಗೆ ಸ್ಪಂದಿಸುವ ಯಾವೂದೇ ಕೆಲಸ ನಡೆಯುತ್ತಿಲ್ಲ. ಸರಕಾರಿ ಕಚೇರಿಗಳು ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ಮನಪಾ ಚುನಾವಣೆಯ ಪ್ರಣಾಳಿಕೆಯನ್ನು ಅ.30ರಂದು ಬಿಡಿಗಡೆ ಮಾಡಲಾಗುವುದು. ಪಕ್ಷದ ಮುಖಂಡರಾದ ದೇವೇಗೌಡ ಹಾಗೂ ಎಚ್.ಡಿ .ಕುಮಾರ ಸ್ವಾಮಿಯವರ ಅನುಮೋದನೆ ಪಡೆದು ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು. ಈ ಬಾರಿ 20ರಿಂದ 25 ಅಭ್ಯರ್ಥಿಗಳು ಸ್ಫರ್ಧಿಸಲಿದ್ದಾರೆ. ಅ.30ರಂದು ಎಲ್ಲಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಕನಿಷ್ಠ 15 ಮಂದಿ ಅಭ್ಯರ್ಥಿಗಳು ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದಾರೆ ಈ ಪೈಕಿ ಏಳು ಮಂದಿ ಮಹಿಳಾ ಅಭ್ಯರ್ಥಿಗಳು ಸ್ಫಧಿಸಲಿದ್ದಾರೆ ಎಂದು ಮುಹಮ್ಮದ್ ಕುಂಞ ತಿಳಿಸಿದ್ದಾರೆ.

ಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಚಿವ ಅಮರನಾಥ ಶೆಟ್ಟಿ ತಿಳಿಸಿದ್ದಾರೆ. ಸರಕಾರ ಘೋಷಿಸಿದಂತೆ ಸರಕಾರದ ಯೋಜನೆಗಳು ಸಮರ್ಪಕವಾಗಿ ಕಾರ್ಯಗತಗೊಳ್ಳುತ್ತಿಲ್ಲ. ಘೋಷಣೆ ಮಾಡಿ ಸಾಲಮನ್ನಾದ ಪ್ರಯೋಜನವೂ ರೈತರಿಗೆ ದೊರೆಯುವುದು ಖಾತ್ರಿ ಇಲ್ಲ. ರಾಜ್ಯದ ಖಜಾನೆಯೂ ಖಾಲಿಯದಂತೆ ತೋರುತ್ತಿದೆ.ಸರಕಾರ ಬಹುತೇಕ ಸ್ಥಗಿತಗೊಂಡಿದೆ ಎಂದು ಅಮರನಾಥ ಶೆಟ್ಟಿ ಆರೋಪಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ರಾಂ ಗಣೇಶ್,ಪ್ರವೀಣ್ ಕುಮಾರ್,ಹಮ್ಮಬ್ಬ, ಮಾಜಿ ಮಾನಪಾ ಸದಸ್ಯರಾದ ಅಝೀಝ್ ಕುದ್ರೋಳಿ,ರಮೀಝಾ ಬಾನು, ವಸಂತ ಪೂಜಾರಿ ಮತ್ತು ಜೆಡಿಎಸ್ ವಿವಿಧ ಘಟಕದ ಪದಾಧಿಕಾರಿಗಳಾದ ಅಕ್ಷಿತ್ ಸುವರ್ಣ, ರತ್ನಾಕರ ಸುವರ್ಣ ಮೊದಲಾದವರು ಉಪಸ್ಥಿತರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News