ರಾಣಿ ಅಬ್ಬಕ್ಕ ಮಹಿಳಾ ಪೊಲೀಸ್ ಪಡೆ ದೇಶಕ್ಕೆ ಮಾದರಿಯಾಗಲಿ : ಚಂದ್ರಹಾಸ ಉಳ್ಳಾಲ್

Update: 2019-10-29 12:09 GMT

ಉಳ್ಳಾಲ: ಧೈರ್ಯ, ದೇಶಾಭಿಮಾನ, ಸೌಹಾರ್ದತೆಯ ಪ್ರತೀಕವಾದ ರಾಣಿ ಅಬ್ಬಕ್ಕಳ ಹೆಸರನ್ನಿಟ್ಟ ರಾಣಿ ಅಬ್ಬಕ್ಕ ಮಹಿಳಾ ಪೋಲಿಸ್ ಪಡೆಯ ಕರ್ತವ್ಯ ಗಳು ದೇಶಕ್ಕೆ ಮಾದರಿಯಾಗಲಿ ಎಂದು ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ  ಚಂದ್ರಹಾಸ ಉಳ್ಳಾಲ್  ಹೇಳಿದರು.

ಅವರು ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ತೊಕ್ಕೊಟು ಒಳಪೇಟೆಯಲ್ಲಿರುವ ಕ್ಲಿಕ್ ಮ್ಯಾರೇಜ್ ಹಾಲ್‍ನಲ್ಲಿ ನಡೆದ ರಾಣಿ ಅಬ್ಬಕ್ಕ ಪಡೆಯ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ  ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ್ ಕುಮಾರ್ ರೈ ರಾಣಿ ಅಬ್ಬಕ್ಕ ಮಹಿಳಾ ಪೋಲಿಸ್ ಪಡೆಯ ಸನ್ಮಾನ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಜಯರಾಮ ಶೆಟ್ಟಿ ಮಾತನಾಡಿದರು. ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ರಾಣಿ ಅಬ್ಬಕ್ಕ ಮಹಿಳಾ ಪೋಲಿಸ್ ಪಡೆಯನ್ನು ಸನ್ಮಾನಿಸಿ, ಅಭಿನಂದನಾ ಭಾಷಣದೊಂದಿಗೆ  ದೀಪಾವಳಿ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ರಾಣಿ ಅಬ್ಬಕ್ಕ ಪಡೆಯ ಶ್ರೀಕಲಾ, ಮಹಾದೇವಿ ಕೆ, ಸಪ್ರೀನಾ, ಧನಲಕ್ಷ್ಮಿ, ಭಾರತಿ, ಆರುಣಾರವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಕೃಷ್ಣಪ್ಪ ಸಾಲಿಯಾನ್, ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಹೈದರ್ ಪರ್ತಿಪ್ಪಾಡಿ, ಸಮಿತಿಯ ಪದಾಧಿಕಾರಿಗಳಾದ ಯು.ಪಿ.ಆಲಿಯಬ್ಬ, ಅಬ್ದುಲ್ ಅಝೀಝ್ ಹಕ್, ಡಿ.ಎನ್.ರಾಘವ, ಎಂ ವಾಸುದೇವರಾವ್, ಕೆ.ಎಂ.ಕೆ ಮಂಜನಾಡಿ, ಸತೀಶ್ ಭಂಡಾರಿ, ಬೈಕಾಡಿ ಜನಾರ್ಧನ್ ಆಚಾರ್, ಸುವಾಸಿನಿ ಜೆ.ಬಬ್ಬುಕಟ್ಟೆ, ದೇವಕಿ ಆರ್ ಉಳ್ಳಾಲ್, ರತ್ನಾವತಿ ಜೆ ಬೈಕಾಡಿ, ಅನುಪಮ ಜೆ, ಶಶಿಕಲಾ ಗಟ್ಟಿ, ಮಲ್ಲಿಕಾ ಭಂಡಾರಿ, ಹೇಮಾ ಯು, ಸರೋಜ ಕುಮಾರಿ, ಲೀಲಾವತಿ ಯಂ, ರಝೀಯಾ ಇಬ್ರಾಹಿಂ, ದೇವಕಿ ಯು.ಬೋಳಾರ್, ವೇದಾವತಿ, ಹರಿಣಿ ವಿಜೇಂದ್ರ, ಸತ್ಯವತಿ ಜೆ.ಕೆ, ಶಶಿಕಾಂತಿ ಉಳ್ಳಾಲ್, ರೇಷ್ಮಾ ಹಾಗೂ ರವಿ, ಸುನೀತಾ, ವಸಂತಿ ಮರೋಳಿ, ಮಾಧವಿ ಉಳ್ಳಾಲ್, ಜಗದೀಶ್ ಕೋಟ್ಯಾನ್, ಲಲಿತಾ, ಚಿದಾನಂದ ಎ, ಉಷಾ ಟಿ ಭಟ್, ವಸಂತಿ ಶ್ರೀಧರ್ ಉಳ್ಳಾಲ್, ಜನಾರ್ಧನ ಆಚಾರ್ ಹಾರಾಡಿ, ಗೀತಾ, ಚೇತನಾ, ವನಿತಾ, ಗಿರಿಜಾ, ಶಾಂತಿ, ಬಿ ಕಲಾವತಿ ಕೃಷ್ಣ, ಪ್ರಮೋದ್ ಉಳ್ಳಾಲ್, ಸಹನಾ, ಸುಮಲತಾ, ವಿಶ್ವನಾಥ ತಲಪಾಡಿ, ಲತಾ ತಲಪಾಡಿ, ಲತೀಶ್ ಎಂ ಸಂಕೋಳಿಗೆ, ವಿಶ್ವನಾಥ ಮುಂತಾದವರು ಉಪಸ್ಥಿತರಿದ್ದರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಆನಂದ ಕೆ ಅಸೈಗೋಳಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News