ನಕಲಿ ಚಿನ್ನ ಅಡವಿಟ್ಟು ವಂಚಿಸಿದ ಆರೋಪಿಗಳಿಗೆ ನ್ಯಾಯಾಂಗ ಸೆರೆ

Update: 2019-10-29 16:51 GMT

ಮಂಗಳೂರು, ಅ.29: ಸಹಕಾರಿ ಸಂಘ, ಫೈನಾನ್ಸ್ ಸಹಿತ ಮೂರು ಕಡೆ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂ. ವಂಚಿಸಿದ ಇಡ್ಯಾ ಗ್ರಾಮ ಜನತಾ ಕಾಲನಿಯ ಶಮೀಮಾ ( 28) ಹಾಗೂ ಮುಹಮ್ಮದ್ ಮುಸ್ತಫ( 38) ಮತ್ತು ತಮಿಳುನಾಡಿನ ವೇಳೂರು ನಿವಾಸಿ ಪನ್ನೀರ್ ಸೆಲ್ವಮ್ (46) ಎಂಬವರಿಗೆ ನ್ಯಾಯಾಂಗ ಸೆರೆಯಾಗಿದೆ.

ಸುರತ್ಕಲ್ ಯುನಿಮೋನಿ ಫೈನಾನ್ಸ್ ಸರ್ವಿಸ್‌ನಲ್ಲಿ ಮೇ 9 ಹಾಗೂ ಮೇ 28ರಂದು ಮತ್ತು ಸುರತ್ಕಲ್ ಸ್ವರ್ಣ ಕುಂಭ ವಿವಿದೊದ್ಧೇಶ ಸಹಕಾರಿ ಸಂಘದಲ್ಲಿ ಮೂರು ಬಾರಿ 22 ನಕಲಿ ಬಳೆಗಳನ್ನು ಅಸಲಿ ಎಂದು ಬಿಂಬಿಸಿ ಅಡವಿಟ್ಟು 4,81,681 ರೂ.ವನ್ನು ಸಾಲ ಪಡೆದು ವಂಚಿಸಿದ್ದರು.

ಬಳಿಕ ಹಣಕಾಸು ಸಂಸ್ಥೆಗಳ ಅಧಿಕಾರಿಗಳು ಸಂಶಯಗೊಂಡು ಚಿನ್ನವನ್ನು ಪರಿಶೀಲಿಸಿದಾಗ ನಕಲಿ ಎಂದು ತಿಳಿದುಬಂತು. ಈ ಬಗ್ಗೆ ನೀಡಿದ ದೂರಿನಂತೆ ಸುರತ್ಕಲ್ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News