ನ.13: ಮಂಗಳೂರು ವಿ.ವಿಯಲ್ಲಿ ಕನಕ ಗಂಗೋತ್ರಿ ಕಾರ್ಯಕ್ರಮ

Update: 2019-10-29 17:07 GMT

ಮಂಗಳೂರು, ಅ. 29: ಮಂಗಳೂರು ವಿಶ್ವ ವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದಿಂದ ಕನಕ ಜಯಂತಿ ಪ್ರಯುಕ್ತ 2019 ನ. 13ರಂದು ಬೆಳಗ್ಗೆ ಮಂಗಳೂರು ವಿಶ್ವ ವಿದ್ಯಾನಿಲಯ ಹಳೆಯ ಸೆನೆಟ್ ಸಭಾಂಗಣದಲ್ಲಿ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ಕನಕ ಗಂಗೋತ್ರಿ ಕಾರ್ಯಕ್ರಮ ನಡೆಯಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಕುಲಪತಿ ಪ್ರೊ.ಪಿ.ಎಡಪಡಿತ್ತಾಯ ವಹಿಸಿಕೊಳ್ಳಲಿದ್ದಾರೆ. ಇದೇ ಸಂದರ್ಭ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ ಕನಕ ಕಾವ್ಯ ಭಾಷೆಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ.ಅಧ್ಯಯನ ಪೀಠದ ಅಧ್ಯಕ್ಷರಾದ ಕೆ.ಅಭಯ ಕುಮಾರ್ ಭಾಗವಹಿಸಲಿದ್ದಾರೆ.

ಅದೇ ದಿನ ಸಂಜೆ ಅರೆ ಹೊಳೆ ಪ್ರತಿಷ್ಠಾನದಿಂದ ಗೋಕುಲ ನಿರ್ಗಮನ ಎಂಬ ನೃತ್ಯ ನಾಟಕ ಪ್ರದರ್ಶನ ನಡೆಯಲಿದೆ. ಕನಕ ಗಾಯನ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಸಂಯೋಜಿತ ಮತ್ತು ಸ್ವಾಯತ್ತ ಸ್ನಾತಕೋತ್ತರ ಪದವಿ ಕಾಲೇಜುಗಳ ಸಹಿತ ಸ್ವಾಯತ್ತ ವಿಶ್ವ ವಿದ್ಯಾನಿಲಯಗಳು, ಕಣ್ಣೂರು ವಿಶ್ವ ವಿದ್ಯಾನಿಲಯ ಮತ್ತು ದ.ಕ., ಕೊಡಗು, ಉಡುಪಿ ಜಿಲ್ಲಾ ವ್ಯಾಪ್ತಿಯ ರಾಜೀವ ಗಾಂಧಿ ವೈದ್ಯಕೀಯ ಶಿಕ್ಷಣ, ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವ ವಿದ್ಯಾನಿಲಯಗಳ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು, ಅಧ್ಯಾಪಕ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಳ್ಳಬಹುದಾಗಿದೆ.

ಆಸಕ್ತರು ನ. 12ರೊಳಗಾಗಿ ತಮ್ಮ ಹೆಸರನ್ನು (0824- 2284 360) ನೋಂದಾಯಿಸಿಕೊಳ್ಳಬಹುದು ಪ್ರತಿ ವಿಭಾಗದಲ್ಲಿ ಆಯ್ಕೆಗೊಂಡ ಇಬ್ಬರಿಗೆ ತಲಾ 3000 ನಗದು ಮತ್ತು ಕನಕ ಗಾಯನ ಪುರಸ್ಕಾರ ನಿಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News