ರಾಜ್ಯದ ಕರಾವಳಿಯಲ್ಲಿ ಎರಡು ದಿನ ಭಾರೀ ಮಳೆಯ ಮುನ್ಸೂಚನೆ

Update: 2019-10-30 13:18 GMT

ಉಡುಪಿ, ಅ.30: ಮುಂದಿನ ಎರಡು ದಿನಗಳ ಕಾಲ (ಅ.31, ನ.1) ಉಡುಪಿ ಜಿಲ್ಲೆಯೂ ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಯ ಅಲ್ಲಲ್ಲಿ ಭಾರೀ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅ.31ರಂದು ಕರಾವಳಿ ಜಿಲ್ಲೆಯಾದ್ಯಂತ ಅಲ್ಲಲ್ಲಿ ಭಾರೀ ಮಳೆ ಸುರಿಯಲಿದ್ದು, ಒಟ್ಟು ಮಳೆಯ ಪ್ರಮಾಣ 65ಮಿ.ಮೀ ಮೀರಲಿದೆ. ಅದೇ ರೀತಿ ನ.1ರಂದು ಸಹ ಇನ್ನೂ ಹೆಚ್ಚಿನ ಮಳೆ ಸುರಿಯಲಿದ್ದು, ಮಳೆಯ ಪ್ರಮಾಣ 115ಮಿ.ಮೀ.ನ್ನು ಮೀರಲಿದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News