ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್: ನ. 2ರಂದು ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ
Update: 2019-10-30 18:33 GMT
ಬಂಟ್ವಾಳ, ಅ. 30: ಡೈಮಂಡ್ ಇಂಟರ್‍ನ್ಯಾಷನಲ್ ಸ್ಕೂಲ್ ಬಿ.ಸಿ.ರೋಡ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಹಾಗೂ ಬಂಟ್ವಾಳ ಟ್ರಾಫಿಕ್ ಪೊಲೀಸ್ ಇಲಾಖೆಯ ಜಂಟಿ ಆಶ್ರಯದಲ್ಲಿ "ಸಡಕ್ ಸುರಕ್ಷಾ ಜೀವನ್ ರಕ್ಷಾ" ಶೀರ್ಷಿಕೆಯಡಿ ರಸ್ತೆ ಸುರಕ್ಷತೆ ಜಾಗೃತಿ 2019 ಕಾರ್ಯಕ್ರಮ ನ. 2ರಂದು ಬೆಳಿಗ್ಗೆ 10ಕ್ಕೆ ಬಿ.ಸಿ.ರೋಡಿನ ಕೈಕಂಬ ಜಂಕ್ಷನ್‍ನಲ್ಲಿ ನಡೆಯಲಿದೆ.
ಡೈಮಂಡ್ ಶಾಲೆಯ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಕರಪತ್ರಗಳು ಮತ್ತು ಗುಲಾಬಿಗಳನ್ನು ಚಾಲಕರಿಗೆ ವಿತರಿಸಿ ರಸ್ತೆ ಸುರಕ್ಷಾ ಸಂದೇಶವನ್ನು ತಲುಪಿಸುವರು. ಪೊಲೀಸ್ ಇಲಾಖಾ ಅಧಿಕಾರಿಗಳು, ಶಿಕ್ಷಣ ಇಲಾಖಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಡೈಮಂಡ್ ಎಜುಕೇಷನಲ್ ಟ್ರಸ್ಟ್‍ನ ಪ್ರಕಟನೆ ತಿಳಿಸಿದೆ.