ಮಂಗಳೂರು ಮನಪಾ ಚುನಾವಣೆ: ಪಕ್ಷೇತರರ ಸಹಿತ 236 ನಾಮಪತ್ರಗಳ ಸಲ್ಲಿಕೆ
Update: 2019-10-31 15:54 GMT
ಮಂಗಳೂರು, ಅ.31: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷೇತರರ ಸಹಿತ 236 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಗೆ ಗುರುವಾರ ಅಂತಿಮ ದಿನವಾಗಿತ್ತು. ಬುಧವಾರದವರೆಗೆ ಕೇವಲ 45 ನಾಮಪತ್ರ ಸಲ್ಲಿಕೆಯಾಗಿತ್ತು. ಗುರುವಾರ 191 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಾಂಗ್ರೆಸ್ 66, ಬಿಜೆಪಿ 94, ಜೆಡಿಎಸ್ 14, ಸಿಪಿಐ 1, ಸಿಪಿಎಂ 8, ಎಸ್‌ಡಿಪಿಐ 10, ಜೆಡಿಯು 2, ಡಬ್ಲುಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 3 ಹಾಗೂ ಪಕ್ಷೇತರರ 35 ನಾಮಪತ್ರಗಳು ಸಲ್ಲಿಕೆಯಾಗಿವೆ.
ಗರಿಷ್ಠ ನಾಮಪತ್ರ - 7: ವಾರ್ಡ್ ನಂ. 3, 22, 33, 43, 56ರಲ್ಲಿ
ಕನಿಷ್ಠ ನಾಮಪತ್ರ - 2: ವಾರ್ಡ್ ನಂ. 2, 7, 10, 13,17, 51ರಲ್ಲಿ